ಕಾನೂನು ಸಾಕ್ಷರತಾ ರಥ ಅಭಿಯಾನ, ಸಂಚಾರಿ ಲೋಕ ಅದಾಲತ್ ಸಮಾರೋಪ
ಪುತ್ತೂರು: ಕಳೆದ 4 ದಿನಗಳ ಕಾಲ ಪುತ್ತೂರಿನಾದ್ಯಂತ ನಡೆದ ಕಾನೂನು ಸಾಕ್ಷರತಾ ರಥ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭ ಭಾನುವಾರ ಪುತ್ತೂರು ನ್ಯಾಯಾಲಯದ ಆವರಣದ ಪರಾಶರ ಸಭಾಂಗಣದಲ್ಲಿ ನಡೆಯಿತು. ಅಭಿಯಾನದಡಿಯಲ್ಲಿ ನಡೆದ ಸಂಚಾರಿ ಅದಾಲತ್‌ಗೆ ಒಟ್ಟು 20 ಪ್ರಕರಣಗಳ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 12 ಅರ್ಜಿಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ಸಮಾರೋಪದಲ್ಲಿ ಮಾತನಾಡಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಸಿ.ಕೆ.ಬಸವರಾಜ್ ಮಾತನಾಡಿ ಅಭಿಯಾನ ಯಶಸ್ವಿಯಾಗಿದೆ ಎಂದು ತಿಳಿಸಿದರು. ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಸಮಾರೊಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ವಹಿಸಿದ್ದರು. ನಿಕಟಪೂರ್ವ ಕಾರ್ಯದರ್ಶಿ ಜಗನ್ನಾಥ ರೈ ಜಿ ಸಮಾರೋಪ ಭಾಷಣ ಮಾಡಿದರು. ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ವಿ.ನಾಗರಾಜ್, ಪ್ರಧಾನ ಸಿವಿಲ್ ನ್ಯಾಯಾಧೀಶ ಇಬ್ರಾಹಿಂ ಎಂ. ಮುಜಾವರ್, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ನಿವೃತ್ತ ಸೈನಿಕ ರಮೇಶ್‌ಬಾಬು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಥದ ಚಾಲಕ ರವಿ ಹಾಗೂ ಪೊಲೀಸ್ ಸಿಬ್ಬಂದಿ ಲೊಕೇಶ್ ಅವರನ್ನು ಗೌರವಿಸಲಾಯಿತು. ವಕೀಲ ನೂರುದ್ದೀನ್ ಸಾಲ್ಮರ ಸ್ವಾಗತಿಸಿದರು. ರಮಾನಂದ ಕೆ ವಂದಿಸಿದರು. ಉಪಾಧ್ಯಕ್ಷ ಜಯಾನಂದ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಸಿ.ಕೆ.ಬಸವರಾಜ್ ಮಾತನಾಡುತ್ತಿರುವುದು.