ಹಿಂದೂ ಧರ್ಮದ ಅರ್ಥವೇ ಸಹಿಷ್ಣುತೆಯಾಗಿದೆ, ಆರೆಸ್ಸೆಸ್ಸಿಗರು ಅಸಲಿ ಹಿಂದೂಗಳಲ್ಲ: ತರುಣ್ ಗೊಗೊಯ್
ಅಸ್ಸಾಂ, ಮಾರ್ಚ್.20: ನಾಲ್ಕನೆ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗುವ ಪ್ರಯತ್ನದಲ್ಲಿರುವ ತರುಣ್ ಗೊಗೊಯ್ ತನ್ನ ಗೆಲುವಿನ ಕುರಿತು ಭರವಸೆಯಲ್ಲಿದ್ದಾರೆ.ಬಿಜೆಪಿ ಮತ್ತು ಅಸ್ಸಾಂ ಗಣಪರಿಷತ್‌ನ ಜಗಳ ಅವರಿಗೆ ಲಾಭವುಂಟುಮಾಡಲಿದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ಐಡಿಯ ಎಕ್ಸ್‌ಚೇಂಜ್ ಕಾರ್ಯಕ್ರಮದಲ್ಲಿ ಸಿಎಂ ವಿಭಿನ್ನ ವಿಷಯಗಳಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ. ಜೆಎನ್‌ಯು ವಿವಾದ ಅಸ್ಸಾಂನಲ್ಲಿ ಏನಾದರೂ ಪ್ರಭಾವ ಬೀರಬಹುದೇ ಎಂಬ ಪ್ರಶ್ನೆಗೆ ಹಾಂ ಸ್ವಲ್ಪ ಪ್ರಭಾವ ಆಗಬಹುದು. ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. 1960ರಲ್ಲಿ ಅಸ್ಸಾಂನಲ್ಲಿಯೂ ಬಹುದೊಡ್ಡ ವಿದ್ಯಾರ್ಥಿ ಚಳವಳಿ ಆಗಿತ್ತು. ನಾನು ಅದರ ಭಾಗವಾಗಿದ್ದೆ. ನಮ್ಮ ಪ್ರಧಾನ ಕಾರ್ಯದರ್ಶಿಯನ್ನು ಹೋಟೆಲ್‌ನಿಂದ ಎತ್ತಿ ಒಯ್ಯಲಾಗಿತ್ತು. ನಂತರ ಬಂಧಿಸಲಾಗಿತ್ತು. ಆ ವೇಳೆ ಇಡೀ ರಾಜ್ಯವೇ ಉರಿದಿತ್ತು. ಆನಂತರ ನೆಹರೂ ಅವರೇ ಬರಬೇಕಾಯಿತು. ನಾವು ಅವರಿಗೆ ಬೇಡಿಕೆ ಪತ್ರವೊಂದನ್ನು ನೀಡಿದೆವು. ನಾನು ಕೂಡ ವಿದ್ಯಾರ್ಥಿ ನಾಯಕನಾಗಿಈ ರೀತಿಯ ಆಂದೋಲನವನ್ನು ನೋಡಿದ್ದೇನೆ" ಆ ದಿನಗಳಲ್ಲಿ ಅವರ ಮೇಲೆ ದೇಶದ್ರೋಹಿ ಅರೋಪ ಹೊರಿಸಲಾಗಿತ್ತೇ” ಎಂದು ಪ್ರಶ್ನಸಿದಾಗ ಗೊಗೊಯ್" ದೇಶದ್ರೋಹಿಎಂದರೆ ಏನು? ಒಂದು ವೇಳೆ ಕೇಂದ್ರದ ಕಾನೂನನ್ನು ನಾನು ಪಾಲಿಸುವುದಾದರೆ ನನಗೆ ಸಾವಿರಾರು ಮಂದಿಯನ್ನು ಜೈಲಿಗೆ ಹಾಕಬೇಕಾದಿತು. ಯಾಕೆಂದರೆ ಪ್ರತಿಯೊಬ್ಬರು ಒಂದಲ್ಲ ಒಂದು ವಿಷಯದ ಬೇಡಿಕೆ ಇಡುತ್ತಲೇ ಇರುತ್ತಾರೆ. ಒಂದು ವೇಳೆ ಹಾಗೆ ಎಂದಾದರೆ ಪೂರ್ತಿ ಅಸ್ಸಾಮನ್ನು ಜೈಲನ್ನಾಗಿ ಪರಿವರ್ತಿಸಬೇಕಾದೀತು. ಆಮೇಲೆ ನಾವು ಇದನ್ನು ಹೇಗೆ ನಿಭಾಯಿಸಬಹುದು? ಈವತ್ತಿಗೂ ಬಹಳಷ್ಟು ಮಂದಿ ಉಲ್ಫಾವನ್ನು ಬೆಂಬಲಿಸುತ್ತಿದ್ದಾರೆ. ಆ ಉಲ್ಫಾ ಬೆಂಬಲಿಗರು ನನ್ನ ಜೊತೆಯೂ ಫೋಟೊ ತೆಗೆಸಿಕೊಂಡಿರಬಹುದು. ಆದರೆ ಯಾರಾದರೂ ಶಸ್ತ್ರ ವೆತ್ತಿಕೊಳ್ಳುತ್ತಾರೆ ಮತ್ತು ಹಿಂಸೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದಾದರೆ ಅವರ ವಿರುದ್ಧ ಕ್ರಮಕೈಗೊಳ್ಳಲೇ ಬೇಕು. ಹಾಗಿಲ್ಲದಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯ ವಿದೆ ಎಂದು ನನಗೆ ಅನಿಸುವುದಿಲ್ಲ. ಅವರೆಲ್ಲರೂ ನಮ್ಮ ಸಹೋದರ ಸಹೋದರಿಯರೇ ಆಗಿದ್ದಾರೆ"ಎಂದು ಗೊಗೊಯ್ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು "ಹಿಂದೂ ಧರ್ಮದ ಅರ್ಥವೇ ಸಹಿಷ್ಣುತೆಯಾಗಿದೆ.ಆರೆಸ್ಸೆಸ್(ಸದಸ್ಯರು) ಅಸಲಿ ಹಿಂದೂಗಳಲ್ಲ. ಇದು ನನ್ನ ಥಿಯರಿಯಾಗಿದೆ. ನನ್ನನ್ನು ನಾನು ಹಿಂದೂ ಎಂದು ನಂಬಿದ್ದೇನೆ. ಸಹಿಷ್ಣುತೆ ಅಸಲಿ ಹಿಂದುತ್ವವಾಗಿದೆ.ಆರೆಸ್ಸೆಸ್ ಕೇವಲ ಅಸಮವಾಗಿದೆ. ಅದರ ಸಂಸ್ಕೃತಿ ಮತ್ತು ಪರಂಪರೆಗೆ ಹಾನಿಯೆಸಗುತ್ತಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.