ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಮುಂಬೈ ಬುಕ್ಕಿ ಶಾಮೀಲು
ಮಂಗಳೂರು,ಮಾ.20: ನಗರದ ಕದ್ರಿಯ ವ್ಯಾಸನಗರದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್‌ನ ಹಿಂದೆ ಮುಂಬೈಯ ಬುಕ್ಕಿಯೊಬ್ಬರು ಇರುವುದು ತನಿಖೆಯಿಂದ ತಿಳಿದು ಬಂದಿದ್ದು ಆತನನ್ನು ಶೀಘ್ರದಲ್ಲಿಯೆ ಪತ್ತೆ ಹಚ್ಚಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್ ಎಂ ತಿಳಿಸಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಾ.18 ರಂದು ನ್ಯೂಝಿಲ್ಯಾಂಡ್ ಆಸ್ಟ್ರೇಲಿಯ ನಡುವೆ ನಡೆದ ಕ್ರಿಕೆಟ್ ಪಂದ್ಯಾಟದ ವೇಳೆ ಕದ್ರಿಯಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್‌ನಲ್ಲಿ ಓರ್ವನನ್ನು ಬಂಧಿಸಿದ ನಂತರ ಈ ಮಾಹಿತಿ ತಿಳಿದುಬಂದಿದ್ದು ಅದರ ಮೊದಲ ದಿನ ನಡೆದ ನ್ಯೂಝಿಲ್ಯಾಂಡ್ ಭಾರತ ಕ್ರಿಕೆಟ್ ಪಂದ್ಯಾಟದಲ್ಲೂ ಬೆಟ್ಟಿಂಗ್ ನಡೆದಿದ್ದು ಇದರಲ್ಲಿಯೂ ಮುಂಬೈಯ ಬುಕ್ಕಿಯ ಪಾತ್ರವಿದೆಯೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಿಂದೆ ನಡೆದ ಬೆಟ್ಟಿಂಗ್ ಬಗ್ಗೆಯೂ ಮುಂಬೈ ಬುಕ್ಕಿಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಕದ್ರಿಯಲ್ಲಿ ಬಂಧಿತನಾಗಿರುವ ಆರೋಪಿ ಮುಂಬೈ ಬುಕ್ಕಿಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಈತನ ಮೇಲೆ ಗೂಂಡಾ ಕಾಯ್ದೆಯನ್ನು ಹಾಕುವಂತಹ ಪ್ರಕರಣವಿದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ್ ಎಂ.ಪಾಟೀಲ್ ಉಪಸ್ಥಿತರಿದ್ದರು.