ದೇಶದ ಅರ್ಥವ್ಯವಸ್ಥೆಯಿಂದ ಸಾಮಾಜಿಕ ಅಸಮತೋಲನ: ಬಿ.ಸುರೇಶ್

Update: 2016-03-20 18:06 GMT

ಉಡುಪಿ, ಮಾ.20: ದೇಶದ ಅರ್ಥವ್ಯವಸ್ಥೆಯಿಂದಾಗಿ ಇಂದು ಸಮಾಜದಲ್ಲಿ ಸಾಕಷ್ಟು ಸಮಸ್ಯೆ ಹಾಗೂ ಅಸಮತೋಲನಗಳು ಉದ್ಭವಿಸುತ್ತಿವೆ. ಸಮಾಜದಲ್ಲಿ ರು ಮೂಲ ಕೊರತೆಗಳ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯ್ನ ವನ್ನು ಸಿನೆಮಾಗಳ ಮೂಲಕ ಮಾಡಲು ಸಾಧ್ಯ ಎಂದು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಹೇಳಿದ್ದಾರೆ.

ಉಡುಪಿಯ ಅಮೋಘ ರಂಗ ತಂಡದ ವತಿಯಿಂದ ಉಡುಪಿ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ರಂಗ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕೆಲವು ಮಾಧ್ಯಮಗಳು ಸತ್ಯಗಳನ್ನು ಮರೆಮಾಚಿ ಸುಳ್ಳುಗಳನ್ನು ಜನರ ಮುಂದೆ ಪ್ರತಿಪಾದಿಸುತ್ತಿವೆ. ಆದ್ದರಿಂದ ಜನರಿಂದಲೇ ಆ ಸತ್ಯ ಹೊರಬರುವ ಕೆಲಸವಾಗಬೇಕಾಗಿದೆ. ಸಿನಿಮಾ ಮತ್ತು ರಂಗಭೂಮಿ ಇವುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸಾಮಾಜಿಕ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಹಲವಾರು ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿ ಹಾರ ಕಂಡುಕೊಳ್ಳಲು ಸಾಧ್ಯ ಎಂದರು. ಅಮೋಘ ಸಂಚಾಲಕಿ ಪೂರ್ಣಿಮಾ ಸುರೇಶ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಚಾನೆಲ್

ನಿರ್ದೇಶಕ ಪ್ರಸಾದ್, ಕಲಾವಿದಲಕ್ಷಿ್ಮೀ ನಾರಾಯಣ ಭಟ್, ಶ್ರೀಧರ್ ಬಿ.ಎಸ್. ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News