ಕೃಷಿ ಅಧಿಕಾರಿಗಳಿಗೆ ಕಾಂಗ್ರೆಸ್ ಕಿಸಾನ್ ಘಟಕ ಮನವಿ

Update: 2016-03-20 18:07 GMT

     ಪಡುಬಿದ್ರೆ, ಮಾ.20: ಜಿಲ್ಲೆಯ ಕೃಷಿ ಸಂಬಂಧಿಸಿದ ಇಲಾಖೆಗಳಾದ ಅರಣ್ಯ, ತೋಟಗಾರಿಕಾ, ಕೃಷಿ ಹಾಗೂ ಜಲಾನಯನ ಮತ್ತು ಸಣ್ಣ ನಿರಾವರಿ ಇಲಾಖೆಗಳಿಂದ ಸರಕಾರ ಅನೇಕ ಸವಲತ್ತುಗಳನ್ನು ರೈತರಿಗೆ ಒದಗಿಸಿದ್ದು, ಇದನ್ನು ರೈತರಿಗೆ ವಿತರಿಸುವ ಜವಾಬ್ದಾರಿ ಜಿಲ್ಲೆಯ ಕೃಷಿ ಅಧಿಕಾರಿಗಳದ್ದಾಗಿದೆ. ಮಾರ್ಚ್ ಅಂತ್ಯದೊಳಗೆ ಕೃಷಿ ಇಲಾಖೆಗಳಲ್ಲಿರುವ ಎಲ್ಲಾ ಅನುದಾನ ಮತ್ತು ಸೌಲಭ್ಯಗಳನ್ನು ರೈತರಿಗೆ ವಿತರಿಸಬೇಕೆಂದು ಜಿಲ್ಲೆಯ ಕೃಷಿ ಅಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಆಗ್ರಹಿಸಿದೆ.
       
 ಸರಕಾರ ರೈತರಿಗೆ ನೀಡಿದ ಯಾವುದೇ ಸವಲತ್ತು ತಲುಪದಿದ್ದಲ್ಲಿ ಅಥವಾ ದುರುಪಯೋಗವಾದಲ್ಲಿ ಆಯಾಯ ಇಲಾಖೆಯ ಜಿಲ್ಲಾ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ. ಈಗಾಗಲೇ ಕೃಷಿ ಇಲಾಖೆಗಳಲ್ಲಿ ರೈತರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಗಮನಕ್ಕೆ ಬಂದಿದ್ದು, ಇಂತಹ ಅಧಿಕಾರಿಗಳನ್ನು ಗುರುತಿಸಿ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ. ಎಪ್ರಿಲ್ ತಿಂಗಳಲ್ಲಿ ಕೃಷಿ ಇಲಾಖೆಯ ಎಲ್ಲ ಯೋಜನಾ ಅನುಷ್ಠಾನ ವರದಿಯನ್ನು ಮಾಹಿತಿ ಹಕ್ಕಿನಿಂದ ಪಡೆದು ಕಾಂಗ್ರೆಸ್ ಕಿಸಾನ್ ಘಟಕವು ಪರಿಶೀಲಿಸಲಿದೆ. ಆದ್ದರಿಂದ ಸರಕಾರ ರೈತರಿಗೆ ನೀಡಿದ ಸವಲತ್ತನ್ನು ಪೂರ್ಣವಾಗಿ ವಿತರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಎಲ್ಲೂರು ಶಶಿಧರ ಶೆಟ್ಟಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News