×
Ad

ಸುಳ್ಯ: ಎಪ್ರಿಲ್ 10ರಿಂದ ‘ರಂಗಮನೆ’ಯಲ್ಲಿ ಬೇಸಿಗೆ ಶಿಬಿರ

Update: 2016-03-20 23:40 IST

ಸುಳ್ಯ, ಮಾ.20: ಸುಳ್ಯ ಹಳೆಗೇಟಿನಲ್ಲಿರುವ ಸಾಂಸ್ಕೃತಿಕ ಕಲಾ ಕೇಂದ್ರ ‘ರಂಗಮನೆ’ಯಲ್ಲಿ ಎಪ್ರಿಲ್ 10ರಿಂದ 17ರವರೆಗೆ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ‘ಚಿಣ್ಣರಮೇಳ -2016’ ನಡೆಯಲಿದೆ.

ರಂಗನಿರ್ದೇಶಕ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ 20 ಕಲಾವಿದರು ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ನೀಡಲಿದ್ದಾರೆ. 8ರಿಂದ 15 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಮಾ.27ರಂದು ರಂಗಮನೆಯಲ್ಲಿ ನೀಡುವ ಪ್ರವೇಶಪತ್ರ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News