ವಿಶ್ವಕಪ್ ಮುಗಿಯುವ ತನಕ ಅಫ್ರಿದಿ ಟ್ವೆಂಟಿ-20 ತಂಡದ ನಾಯಕ: ಪಿಸಿಬಿ
ಕರಾಚಿ, ಮಾ.21: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಹಾಗೂ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಭಾರತದಲ್ಲಿ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್ ಮುಗಿಯುವ ತನಕ ತಂಡದ ನಾಯಕರಾಗಿರುತ್ತಾರೆ. ಬಳಿಕ ಟ್ವೆಂಟಿ-20 ತಂಡದ ನಾಯಕತ್ವ ಬದಲಾವಣೆಯಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ತಿಳಿಸಿದ್ದಾರೆ.
ಕೋಲ್ಕತಾದಿಂದ ಇಂದು ಬೆಳಗ್ಗೆ ಆಗಮಿಸಿದ ಅವರು ಅಫ್ರಿದಿ ವಿಶ್ವಕಪ್ ಮುಗಿದ ಬಳಿಕ ಕ್ರಿಕೆಟ್‌ನಿಂದ ನಿವೃತ್ತರಾಗಲಿದ್ದಾರೆ. ಈ ವಿಚಾರವನ್ನು ಅಫ್ರಿದಿ ಈಗಾಗಲೇ ಪಿಸಿಬಿಗೆ ತಿಳಿಸಿದ್ದಾರೆ. ಒಂದು ವೇಳೆ ತನ್ನ ನಿರ್ಧಾರವನ್ನು ಬದಲಿಸಿದರೆ ಅವರನ್ನು ತಂಡಕ್ಕೆ ಮತ್ತೆ ಆಯ್ಕೆ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.
ವಿಶ್ವಕಪ್ ಬಳಿಕ ಕೋಚ್ ಬದಲಾವಣೆಯ ಬಗ್ಗೆ ಖಾನ್ ಸುಳಿವು ನೀಡಿದ್ದಾರೆ. ಕೋಚ್ ವಕಾರ್ ಯೂನಿಸ್ ಒಪ್ಪಂದ ಅವಧಿ ಮುಂದಿನ ಜೂನ್‌ಗೆ ಕೊನೆಗೊಳ್ಳಲಿದೆ. ಬಳಿಕ ಪಾಕ್ ತಂಡಕ್ಕೆ ಹೊಸ ಕೋಚ್ ನೇಮಕ ಮಾಡುವ ಬಗ್ಗೆ ಯೋಚಿಸಲಾಗುವುದು. ವಿದೇಶಿ ಕೋಚ್‌ಗಳನ್ನು ನೇಮಕ ಮಾಡುವ ಬಗ್ಗೆ ವಸೀಮ್ ಅಕ್ರಮ್ ಸೇರಿದಂತೆ ಮಾಜಿ ಆಟಗಾರರೊಂದಿಗೆ ಚರ್ಚಿಸಲಾಗುವುದು ಎಂದು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಮಾಹಿತಿ ನೀಡಿದರು.
,,,,,,,,