×
Ad

ಕೆವಿಜಿ ವಿದ್ಯಾರ್ಥಿಗಳಿಂದ ಅನ್ವೇಷಣೆಗಳ ಅನಾವರಣ

Update: 2016-03-21 23:11 IST

ಸುಳ್ಯ, ಮಾ.21: ವಾಹನ ಅಪಘಾತ ಸಂಭ ವಿಸುವುದನ್ನು ತಪ್ಪಿಸುವ, ಅಪಘಾತ ಸಂದರ್ಭ ವಾಹನದ ಬಂಪರ್ ಹೊರ ಚಾಚುವ ಸೆನ್ಸರ್ ವ್ಯವಸ್ಥೆಯನ್ನು ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿ ಗಳ ತಂಡ ಅಭಿವೃದ್ಧಿಪಡಿಸಿದೆ. ವಿದ್ಯಾರ್ಥಿಗಳ ನೂತನ ಸಂಶೋಧನೆಯಂತೆ ಮೈಕ್ರೋ ಕಂಟ್ರೋಲರ್ ಸೆನ್ಸರ್ ಮೂಲಕ ವಾಹನದ ಬಂಪರ್ ಮುಂದಕ್ಕೆ ಚಲಿಸಿ ವಾಹನ ಹಾನಿಯಾಗುವುದನ್ನು ತಪ್ಪಿಸಬ ಹುದು. ವಾಹನದ ಬಂಪರ್ ಒಳಗೆ ಮತ್ತು ಹೊರಗೆ ಚಾಚುವ ವ್ಯವಸ್ಥೆ ಈ ತಂತ್ರ ಜ್ಞಾನದಲ್ಲಿದೆ. ಕಂಪ್ರೆಸರ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ವಾಹನದ ಕಂಪ್ರ ಸರ್‌ಗೆ ಇದನ್ನು ಸಂಪರ್ಕಿಸಿದರೆ ಇದು ತನ್ನಿಂತಾನೆ ಕೆಲಸ ನಿರ್ವಹಿಸುತ್ತದೆ. ವಾಹನ ಎಷ್ಟೇ ವೇಗವಾಗಿದ್ದರೂ ಬಂಪರ್ ಮೇಲ್ಬದಿ ಅಳವಡಿಸಿದ ಸೆನ್ಸರ್ ಎದುರಿಗೆ ಏನೇ ಸಿಕ್ಕಿದರೂ ತಕ್ಷಣ ಗುರುತಿಸಿ ಬಂಪರ್‌ನ್ನು ಹೊರಕ್ಕೆ ದೂಡು ತ್ತದೆ. ಈ ವ್ಯವಸ್ಥೆ ಎಲ್ಲ ವಾಹನಗಳಿಗೂ ಅಳ ವಡಿಸಿದರೆ ಅಪಘಾತ ಸಂದರ್ಭ ಪ್ರಾಣ ಹಾನಿ ಯಾಗುವುದನ್ನು ಸಾಕಷ್ಟು ತಪ್ಪಿಸಬಹುದು ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.

ಕಾಲೇಜಿನ ಪ್ರಾಂಶುಪಾಲ ಎನ್.ಆರ್.ಗಣೇಶ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಎಂ.ಸಿ.ನಾಗರಾಜ್, ಎಂ.ಎನ್.ಚಂದ್ರಶೇಖರ್, ಚೆನ್ನಕೇಶವ ಮಾರ್ಗದ ರ್ಶನದಲ್ಲಿ ವಿದ್ಯಾರ್ಥಿ ಗಳಾದ ಕೆ.ಮನೋಜ್ ಕುಮಾರ್, ಕೆ.ಎಸ್.ಮೆಲ್ವಿನ್, ಪಿ.ಮೋಹಿತ್, ಎನ್.ಮೋಹಿತ್ ಕುಮಾರ್, ಎಂ.ಮಯೂರ್ ಕುಮಾರ್ ಈ ತಂತ್ರ ಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News