ಹಿರಿಯ ನಾಗರಿಕರ ಸಂಘದ ಕಾರ್ಯಾಲಯ ಉದ್ಘಾಟನೆ
ಪುತ್ತೂರು, ಮಾ.21: ಹಿರಿಯರು ಮಾನ ಸಿಕವಾಗಿ ಧೃತಿಗೆಡದೆ ಸಧೃಡತೆಯ ಮೂಲಕ ಸಂಘಟಿತರಾಗಿ ಯುವ ಸಮುದಾಯಕ್ಕೆ ದಾರಿದೀಪವಾಗಬೇಕು. ಪುತ್ತೂರಿನಲ್ಲಿ ವೃದ್ಧರ ನಿಲಯ ಆರಂಭಿಸುವ ಕುರಿತು ತಾನು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕಿ ಹಾಗೂ ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಹೇಳಿದರು.ಪುತ್ತೂರಿನ ನಗರಸಭೆಯ ಸಮುದಾಯ ಭವನದಲ್ಲಿ ಹಿರಿಯ ನಾಗರಿಕರ ಹಿತರಕ್ಷಣಾ ಸಂಘದ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಬಸ್‌ನಲ್ಲಿ ಹಿರಿಯರಿಗೆಂದು ಮೀಸಲಿಟ್ಟ ಸೀಟನ್ನು ಅವರಿಗೇ ಸೀಮಿತ ಗೊಳಿಸಬೇಕು. ಖಾಸಗಿ ಬಸ್ಸಿನಲ್ಲೂ ರಿಯಾ ಯಿತಿ ಪಾಸ್ ಒದಗಿಸಬೇಕು ಎಂಬ ಹಿರಿಯರ ಬೇಡಿಕೆಗಳಿಗೆ ಉತ್ತರಿಸಿದ ಶಾಸಕರು, ಮಾನವೀಯತೆ ಇದ್ದಾಗ ಸೀಟು ಮೀಸಲಿನ ಅಗತ್ಯ ಬೀಳುವುದಿಲ್ಲ. ಹಿರಿಯರಿಗೆ ಗೌರವ ಕೊಡುವುದನ್ನು ಕಿರಿಯರಿಗೆ ಕಲಿಸಿಕೊಡದಿದ್ದಾಗ ಇಂತಹ ಸಂದರ್ಭ ಉದ್ಭವಿಸುತ್ತದೆ. ಬೇಡಿಕೆಯ ಕುರಿತು ಕೆಎಸ್ಸಾರ್ಟಿಸಿ ಹಾಗೂ ಮಂಗಳೂರು ಖಾಸಗಿ ಬಸ್ ಮಾಲಕರ ಸಂಘದ ಗಮನ ಸೆಳೆಯಬೇಕಾಗಿದೆ ಎಂದರು.
ಪುತ್ತೂರು ನಗರಸಭಾ ಪೌರಾಯುಕ್ತೆ ರೇಖಾ ಜೆ.ಶೆಟ್ಟಿ, ನಗರಸಭಾ ನಿಕಟ ಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಶುಭಹಾರೈಸಿದರು. ಹಿರಿಯ ನಾಗರಿಕ ಹಿತ ರಕ್ಷಣಾ ಸಂಘದ ಅಧ್ಯಕ್ಷ ಬಿ.ಎಸ್. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಮುಹಮ್ಮದ್ ಆಲಿ ಉಪಸ್ಥಿತರಿದ್ದರು. ಹಿರಿಯ ನಾಗರಿಕ ಹಿತರಕ್ಷಣಾ ಸಂಘದ ಉಪಾಧ್ಯಕ್ಷ ರಾಮ ನಾಕ್ ಸ್ವಾಗತಿಸಿದರು. ಕೆ.ಸಿ. ಜನಾರ್ದನ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಶಂಕರಿ ಭಟ್ ಕಾರ್ಯಕ್ರಮ ನಿರೂಪಿಸಿದರು.