×
Ad

ಕಣಚೂರು: ಮಧುಮೇಹ ತಪಾಸಣಾ ಶಿಬಿರ

Update: 2016-03-21 23:14 IST

 ಮಂಗಳೂರು, ಮಾ.21: ನಾಟೆಕಲ್‌ನ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಿತು. ಶಿಬಿರ ಉದ್ಘಾಟಿಸಿದ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಅಸೋಸಿಯೆಟ್ ಪ್ರೊಫೆಸರ್ ಡಾ.ಸುಧೀಂದ್ರ ರಾವ್ ಮಾತನಾಡಿ, ಮಧುಮೇಹ ಕಾಯಿಲೆಯ ಲಕ್ಷಣ, ಕಾಯಿಲೆಯ ವಿಧಗಳು, ಅದಕ್ಕಿರುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ದುರ್ರಹ್ಮಾನ್, ಡಾ.ದೇವಿಪ್ರಸಾದ್, ಡಾ. ರೋಹನ್ ಶಾರೊನ್ ಮೋನಿಸ್, ಡಾ. ರಾಮೆಗೌಡ ಉಪಸ್ಥಿತರಿದ್ದರು. ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ದೀಪಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News