×
Ad

ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಪ್ರತಿನಿಧಿಗಳ ಸಂಗಮ

Update: 2016-03-21 23:16 IST

ಉಪ್ಪಿನಂಗಡಿ, ಮಾ.21: ಭಯವಿರುವವನು ಮಾತ್ರ ಭಯೋತ್ಪಾದನಾ ಚಟುವಟಿ ಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಸಮಾಧಾನ ದಲ್ಲಿರುವವನು ಯಾವಾಗಲೂ ಧೀರನಾಗಿರುತ್ತಾನೆ. ನಮಗೆ ಯಾರದೇ ಭಯವಿಲ್ಲ. ಆದ್ದರಿಂದ ನಾವು ಸಮಾಜಘಾತುಕ ಶಕ್ತಿಗಳ ವಿರುದ್ಧ ಧೈರ್ಯದಿಂದಲೇ ಹೋರಾಡುತ್ತೇವೆ ಎಂದು ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಅಡ್ವೋಕೇಟ್ ಓನಂಪಳ್ಳಿ ಮುಹಮ್ಮದ್ ಫೈಝಿ ಹೇಳಿದರು.

ಉಪ್ಪಿನಂಗಡಿಯ ಪೆರ್ನೆ ಎ.ಎಂ. ಅಡಿ ಟೋರಿಯಂನಲ್ಲಿ ನಡೆದ ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಪ್ರತಿನಿಧಿಗಳ ಸಂಗಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಹಾಕ್ ಫೈಝಿ ಕುಕ್ಕಿಲ ವಹಿಸಿದ್ದರು.

‘ಸಂಘಟನೆ ಮತ್ತು ಭಯೋತ್ಪಾದನೆ’ ಎಂಬ ವಿಷಯದ ಬಗ್ಗೆ ಎಸ್‌ವೈಎಸ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಹಮೀದ್ ಫೈಝಿ ಅಂಬಲಕ್ಕಡವು ಮಾತನಾಡಿದರು. ಮಂಗಳೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಮೌಲಾನಾ ಅನೀಸ್ ಕೌಸರಿ, ಮುಸ್ತಫಾ ಹಾಜಿ ಕೆಂಪಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕುಂಬ್ರ ಕೆಐಸಿ ಸಂಚಾ ಲಕ ಹುಸೈನ್ ದಾರಿಮಿ ರೆಂಜಲಾಡಿ, ಖಾಸಿಂ ದಾರಿಮಿ ಕಿನ್ಯ, ಅಬ್ಬಾಸ್ ದಾರಿಮಿ ಕೆಲಿಂಜ, ಹಮೀದ್ ದಾರಿಮಿ ಸಂಪ್ಯ, ಆತೂರು ತಂಙಳ್, ಕರಾವಳಿ ತಂಙಳ್, ಇಸ್ಮಾಯೀಲ್ ಯಮಾನಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಎಸ್ಕೆಎಸ್ಸೆಸ್ಸೆಫ್ ಅಧ್ಯ ಕ್ಷರಾಗಿ ಆಯ್ಕೆಯಾದ ಅನೀಸ್ ಕೌಸರಿ ಅವರನ್ನು ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ರಶೀದ್ ರಹ್ಮಾನಿ ಸ್ವಾಗತಿಸಿದರು. ಜಲೀಲ್ ಬದ್ರಿಯಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News