ರಿಕ್ಷಾಕ್ಕೆ ಸರಕಾರಿ ಬಸ್ ಢಿಕ್ಕಿ: ನಾಲ್ವರಿಗೆ ಗಾಯ
Update: 2016-03-21 23:34 IST
ಬಂಟ್ವಾಳ, ಮಾ.21: ಬಿ.ಸಿ.ರೋಡ್ ಕೈಕಂಬ ಶಾಂತಿಅಂಗಡಿ ಮಸೀದಿ ಎದುರು ಕೆಎಸ್ಸಾರ್ಟಿಸಿ ಬಸ್ಸೊಂದು ರಿಕ್ಷಾಕ್ಕೆ ಢಿಕ್ಕಿಯಾಗಿದ್ದು, ಚಾಲಕ ಸಹಿತ ಮೂವರು ಪ್ರಯಾಣಿಕರಿಗೆ ಗಾಯಗಳಾಗಿದ್ದು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಗಾಯಾಳುಗಳ ಹೆಸರು ವಿಳಾಸ ಲಭ್ಯವಾಗಿಲ್ಲ. ಘಟನೆಯ ಸಂದರ್ಭ ಸ್ಥಳದಲ್ಲಿ ಸೇರಿದವರು ಬಸ್ ಚಾಲಕನಿಗೆ ಹಲ್ಲೆ ಮಾಡಿದ್ದು ಅವರು ಠಾಣೆಗೆ ದೂರು ನೀಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಚಾಲಕ ಮತ್ತು ನಿರ್ವಾಹಕರು ವಾಹನವನ್ನು ಬಿಟ್ಟು ತೆರಳಿದ್ದು, ಪ್ರಯಾಣಿಕರು ಇಳಿದು ಇತರ ವಾಹನಗಳಲ್ಲಿ ಸಂಚರಿಸಿದ್ದಾಗಿ ತಿಳಿದು ಬಂದಿದೆ.
ಘಟನೆಯ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.