×
Ad

ಮತದಾರರ ಪಟ್ಟಿ ಶುದ್ಧೀಕರಣ

Update: 2016-03-21 23:57 IST

ಉಡುಪಿ, ಮಾ.21: ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ಮಾ.1ರಿಂದ ಆ.31ರವರೆಗೆ ನ್ಯಾಷನಲ್ ಇಲೆಕ್ಟೋರಲ್ ರೋಲ್ಸ್ ಪ್ಯುರಿಫಿಕೇಶನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಉದ್ದೇಶ ಹಾಗೂ ವಿವರ ಹೀಗಿದೆ.

ಶೇ.100ರಷ್ಟು ಭಾವಚಿತ್ರ ಸಹಿತ ಮತದಾರರ ಗುರುತು ಚೀಟಿ, 18ರಿಂದ 19 ವಯೋಮಿತಿಯೊಳಗಿನ ಮತದಾರರ ನೋಂದಣಿ, ಮತದಾರರ ಪಟ್ಟಿಯ ಲ್ಲಿರುವ ವಿವಿಧ ರೀತಿಯ ಲೋಪದೋಷಗಳನ್ನು ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳುವುದು. ಮೃತ/ಡುಪ್ಲಿಕೇಟ್/ವಲಸೆಹೋದ ಮತದಾರರ ಹೆಸರನ್ನು ತೆಗೆದುಹಾಕುವುದು, ಎಪಿಕ್ ನಂಬರ್‌ಗಳಲ್ಲಿರುವ ದೋಷವನ್ನು ಸರಿಪಡಿಸುವುದು, ಫೋಟೋಗಳ ದೋಷವಿದ್ದಲ್ಲಿ ಸರಿಪಡಿಸುವುದು ಹಾಗೂ ಇ.ಪಿ. ಪ್ರಮಾಣ ಸರಿದೂಗಿಸಲಾಗುವುದು.

ಈ ಕಾರ್ಯಕ್ರಮದಂತೆ ಯಾವುದೇ ಹೊಸ ನೋಂದಣಿ, ಮತದಾರರ ಪಟ್ಟಿಯಲ್ಲಿರುವ ಲೋಪದೋಷ/ಚೂಕಿಗಳ ಸರಿಪಡಿಸುವಿಕೆಗಳಿದ್ದಲ್ಲಿ ಅವುಗಳನ್ನು ಮಾ.1ರಿಂದ ಆ.31ರ ಅವಧಿಯಲ್ಲಿ ಮಾಡಿಸಿಕೊಳ್ಳಲು ನಮೂದಿತ ನಮೂನೆಯಲ್ಲಿ ಅರ್ಜಿಯನ್ನು ಆಯಾಯಾ ತಾಲೂಕಿನ ತಹಶೀಲ್ದಾರ್ ಕಚೇರಿ, ಕುಂದಾಪುರದ ಸಹಾಯಕ ಕಮಿಷನರ್ ಕಚೇರಿ ಅಥವಾ ಆಯಾಯ ಕ್ಷೇತ್ರಗಳ ಮತಗಟ್ಟೆ ಅಧಿಕಾರಿಗಳಿಂದ ಪಡೆದು ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News