×
Ad

ಅಂಚೆ ಕಚೇರಿಗೆ ಬರಲು ಹಿಂದೇಟು ಹಾಕುತ್ತಿರುವ ವೃದ್ದರು!

Update: 2016-03-22 14:39 IST

ಮುಂಡಗೋಡ, ಮಾ.22: ಪಟ್ಟಣದ  ಅಂಚೆ ಕಚೇರಿಗೆ ಮೆಟ್ಟಿಲಗಳು ಇಲ್ಲದಿರುವುದರಿಂದ ಅಂಗವಿಕಲರು, ವೃದ್ದರು ಅಶಕ್ತರು, ಮಹಿಳೆಯರು ವ್ಯವಹರಿಸುವುದು ಕಷ್ಟ ಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿದೆ

 ರಸ್ತೆ ಅಗಲೀಕರಣದ ಕಾಮಗಾರಿಯಿಂದ ಅಂಚೆ ಕಚೇರಿಯ ಮೆಟ್ಟಿಲಗಳು ನೆಲ ಸಮಗೊಂಡಿರುವುದರಿಂದ ಕಚೇರಿಗೆ ವ್ಯವಹಾರ ಮಾಡಲು ಬರುವ ಸಾರ್ವಜನಿಕರಿಗೆ ಮೆಟ್ಟಿಲುಗಳೆ ಇಲ್ಲದಂತಾಗಿ ಕಚೇರಿಯ ಅಂಚಿನಲ್ಲಿರುವ ಅಲ್ಪಸ್ವಲ್ಪ ಮೆಟ್ಟಿಲ( ಮೆಟ್ಟಿಲುಗಳ ನಡುವೆ ದೊಡ್ಡ ಅಂತರವಿರುವುದರಿಂದ) ಸಹಾಯದಿಂದ ಶಕ್ತಿ ಹಾಕಿ ಅಶಕ್ತರು ವ್ಯವಹಾರ ಮಾಡಲು ದುಸ್ತರವಾಗಿದೆ.

ಅಸಾಹಯಕರು ಮೆಟ್ಟಿಲ ಕೆಳಗೆ ನಿಂತು ಬಂದಂತಹ ಸಾರ್ವಜನಿಕರ ಅಂಗಲಾಚಿ ತಮ್ಮ ಕೆಲಸಮಾಡಿಕೊಳ್ಳುವುದು ಕಳೆದ ಐದಾರು ದಿನದಿಂದ ನಡೆದಿದೆ. ಎಲ್ಲರೂ ಅಶಕ್ತರ ನೆರವಿಗೆ ಬರುತ್ತಾರೆ ಎಂಬುದು ಹೇಳಲು ಸಾಧ್ಯವಿಲ್ಲ. ಕೆಲ ಅಶಕ್ತರು ಪೊಸ್ಟ ಕಚೇರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.ಈ ಕುರಿತು ಪೊಸ್ಟ ಕಚೇರಿಯ ಪೊಸ್ಟ ಮಾಸ್ಟರ ಭಟ್ ರವನ್ನು ಸಂಪರ್ಕಿಸಿ ಅಂಗವಿಕಲರು ವೃದ್ದರು ಅಶಕ್ತರು ಮಹಿಳೆಯರಿಗೆ ಆಗುತ್ತಿರುವ ತೊಂದರೆ ಕುರಿತು ಕೇಳಿದಾಗ ನೋಡ್ರಿ ಇದನ್ನು ಕಂಡು ನಮಗೂ ಬೇಸರವೆನಿಸುತ್ತಿದೆ. ಮೇಲಾಧಿಕಾರಿಗಳ ಆದೇಶವಿಲ್ಲದೆ ನಾವೇನು ಮಾಡಲು ಸಾಧ್ಯವಿಲ ಈ ಬಗ್ಗೆ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಅವರ ಆದೇಶ ಬಂದ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುವುದು ಆದರೆ ಎಷ್ಟು ದಿನ ಎಂದು ಹೇಳಲು ಸಾಧ್ಯವಿಲ್ಲ, ಆದಷ್ಟು ಬೇಗನೆ ಯಾರಿಗೂ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News