×
Ad

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್‌ಗೆ ಬಿಜೆಪಿ ರಾಜ್ಯಸಭಾ ಸದಸ್ಯತ್ವ?

Update: 2016-03-22 14:53 IST

ತಿರುವನಂತಪುರಂ, ಮಾ. 22: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್‌ರನ್ನು ಬಿಜೆಪಿ ರಾಜ್ಯಸಭೆಗೆ ನೇಮಕಗೊಳಿಸಲಿದೆಯೆಂಬ ಸೂಚನೆ ಲಭಿಸಿದೆ.

ಕಲಾಕಾರರ ಸಾಮರ್ಥ್ಯದ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡುವುದನ್ನು ಚಿಂತಿಸುತ್ತಿದೆಯೆಂದು ವರದಿಯಾಗಿದೆ. ಕನ್ಹಯ್ಯ ಕುಮಾರ್ ಮತ್ತು ಜೆಎನ್‌ಯು ವಿವಾದದಲ್ಲಿ ಮೋಹನ್ ಲಾಲ್ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿ ರಂಗಪ್ರವೇಶಿಸಿದ್ದರು.

ಮೋಹನ್‌ಲಾಲ್ ಈಗ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ರಾಷ್ಟ್ರವನ್ನು ಬೆಂಬಲಿಸಿ ರಂಗಪ್ರವೇಶಿಸಿದವರನ್ನೆಲ್ಲ ಬಿಜೆಪಿಯವರು ಎಂದು ಭಾವಿಸುವ ರೂಢಿ ಈಗ ಅಸ್ಥಿತ್ವದಲ್ಲಿದೆ. ಆದರೆ ಮೋಹನ್‌ಲಾಲ್‌ರ ದೇಶಪ್ರೇಮ ಹೀಗಲ್ಲ.ಈ ಮೊದಲೇ ಅದು ಚರ್ಚೆಗೊಳಗಾಗಿವೆ. ದೇಶದ ಅಖಂಡತೆಯನ್ನು ಪ್ರಶ್ನಿಸುವ ಯಾವುದನ್ನೂ ಮೋಹನ್‌ಲಾಲ್ ಒಪ್ಪುವುದಿಲ್ಲವೆಂದು ಹೇಳಲಾಗುತ್ತಿದೆ.

ಮೋಹನ್‌ಲಾಲ್‌ರನ್ನು ಎಂಪಿಯನ್ನಾಗಿ ಮಾಡಿದರೂ ಅವರು ರಾಜಕೀಯದಲ್ಲಿ ಸಕ್ರಿಯವಾಗಿರಬೇಕಾಗಿಲ್ಲ. ಸಚಿನ್ ತೆಂಡುಲ್ಕರ್ ಎಂಪಿಯಾಗಿದ್ದಾರೆ. ಆದರೆ ಅವರು ರಾಜಕೀಯದಲ್ಲಿ ಸಕ್ರೀಯರಾಗಿಲ್ಲ. ಪ್ರಥಮ ಶ್ರೇಣಿಯ ಕಲಾಕಾರರಿಗೆ ಎಂಪಿ ಸ್ಥಾನ ನೀಡುವುದು ರಾಷ್ಟ್ರ ಕೊಡುವ ಅನುಮೋದನೆಯಾಗಿದೆಯೆನ್ನಲಾಗಿದೆ.

ಶಾಲೆ ಮತ್ತು ಕಾಲೇಜ್‌ಗಳಲ್ಲಿ ಕಲಿಯುತ್ತಿದ್ದಾಗ ಮೋಹನ್‌ಲಾಲ್ ಬಲಪಂಥೀಯರಾಗಿದ್ದರೂ ನಟನಾದ ಮೇಲೆ ಅವರು ಎನ್‌ಎಸ್‌ಎಸ್‌ನೊಂದಿಗೆ ನಿಕಟರಾಗಿದ್ದರೆಂದು ಹೇಳಲಾಗುತ್ತಿದೆ.

ಎನ್‌ಎಸ್‌ಎಸ್‌ನ ಪೆರುನ್ನದಲ್ಲಿ ನಡೆದ ಸಭೆಯಲ್ಲಿ ಅವರು ಭಾಗವಹಿಸಿ ಭಾಷಣ ಮಾಡಿದ್ದರು. ಹೀಗಿದ್ದರು ಎಂಪಿ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲವಾದರೂ ಮೋಹನ್‌ಲಾಲ್‌ರಂಥವರಿಗೆ ಸ್ಥಾನ ನೀಡಿದರೆ ಕೇರಳದಲ್ಲಿ ಬಿಜೆಪಿ ಬೇರೂರಲು ಸಹಾಯಕವಾಗಲಿದೆ ಎಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಭಾವಿಸಿದ್ದಾರೆಂದು ವರದಿಯಾಗಿದೆ.

ನರೇಂದ್ರ ಮೋದಿಯ ನಂಬಿಗಸ್ಥರೊಬ್ಬರು ಮೋಹನ್‌ಲಾಲ್ ಕುರಿತು ಮೋದಿಗೆ ವಿವರಿಸಿದ್ದಾರೆನ್ನಲಾಗಿದೆ. ಈ ಹಿಂದೆ ಸಿಪಿಐಎಂ ಮಮ್ಮುಟ್ಟಿಯವರನ್ನು ರಾಜ್ಯಸಭಾ ಸದಸ್ಯರನ್ನಾಗಿಲಸಲು ಚಿಂತಿಸಿತ್ತೆಂದು ವರದಿಯಾಗಿತ್ತು. ಮಮ್ಮುಟ್ಟಿ ಕೈರಳಿ ಚ್ಯಾನೆಲ್‌ನ ಚೇರ್‌ಮೆನ್ ಆಗಿದ್ದಾರೆ.

ಚಿತ್ರ ಕೃಪೆ: ಮಲಯಾಳಂ ವಾರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News