×
Ad

ಮೂರು ದಿನಗಳಲ್ಲಿ 2ನೆ ಫತ್ವಾ: ದೇಶಕ್ಕಾಗಿ ಪ್ರಾಣ ಕೊಡಬಹುದು ಆದರೆ ಭಾರತ್ ಮಾತಾಕಿ ಜೈ ಎನ್ನಲಾಗದು

Update: 2016-03-22 15:14 IST

ಹೈದರಾಬಾದ್, ಮಾ. 22: ಇಲ್ಲಿನ ಇಸ್ಲಾಮೀ ಸಂಘಟನೆಯೊಂದು ’ಭಾರತ್ ಮಾತಾ ಕಿಜೈ’ ವಿರುದ್ಧ ಫತ್ವಾ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ.

ಅಲ್ ಮಹದ್ ಅಲ್ ಅಲಿ ಅಲ್ ಇಸ್ಲಾಮಿ ಸೋಮವಾರ ಹೊರಡಿಸಿದ ಹೇಳಿಕೆಯಲ್ಲಿ ಮುಸ್ಲಿಮರಿಗೆ ಭಾರತ್ ಮಾತಾಕಿ ಜೈಎನ್ನುವುದಕ್ಕೆ ಅನುಮತಿಯಿಲ್ಲ. ಪಹಾಡಿ ಶರೀಫ್‌ನಲ್ಲಿ ಸಂಸ್ಥೆಯ ದಾರುಲ್ ಇಫ್ತಾದ ವತಿಯಿಂದ ಫತ್ವಾ ಜಾರಿಗೊಳಿಸಲಾಗಿದ್ದು ಈ ಸಂಸ್ಥೆ ಮುಸ್ಲಿಮ್ ಪರ್ಸನಲ್ ಲಾ ಬಾರ್ಡ್ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿಯಯವರು ಸ್ಥಾಪಿಸಿದ್ದೆನ್ನಲಾಗಿದೆ.

ಮುಫ್ತಿ ರಾಶಿದ್ ಅಲಿ ಕಾಸಿಮಿಯವರು ಫತ್ವಾವನ್ನು ಧರ್ಮ ಸಮ್ಮತ(ಅನುವದನೀಯ)ವಾಗಿದೆಯೆಂದು ಹೇಳಿದ್ದು ಮಾತೃಭೂಮಿಯಂತಹ ಶಬ್ದಗಳು ದೇಶದ ಅಪಾರ ಪ್ರೇಮವನ್ನು ಜಾಹೀರು ಪಡಿಸುತ್ತದೆ. ಆದರೆ ಮುಸ್ಲಿಮರು ಯಾವುದೇ ದೇಶವನ್ನು ದೇವಿಯೆಂಬ ರೀತಿಯಲ್ಲಿ ಪೂಜಿಸುವಂತಿಲ್ಲ. ಪ್ರತಿಯೊಬ್ಬ ಮುಸ್ಲಿಮ್ ದೇಶವನ್ನು ಪ್ರೀತಿಸುತ್ತಾನೆ. ಮತ್ತು ಇದಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಆದರೆ ಅಲ್ಲಾಹನನ್ನಲ್ಲದೆ ಇನ್ನಾರನ್ನೂ  ಪೂಜಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದಕ್ಕಿಂತ ಮೊದಲು ಹೈದರಾಬಾದ್‌ನ ಜಾಮಿಯ ನಿಝಾಮಿಯದ ವತಿಯಿಂದಲೂ ಇಂತಹದೇ ಫತ್ವಾ ಹೊರಡಿಸಲಾಗಿತ್ತು. ಅದರಲ್ಲಿ ಮಾತೃಭೂಮಿಗೆ ತಾಯಿಯ ಸ್ಥಾನ ನೀಡುವುದು ಅತಾರ್ಕಿಕವಾಗಿದೆ. ಯಾಕೆಂದರೆ ಮನುಷ್ಯನೇ ಮನುಷ್ಯನಿಗೆ ಜನ್ಮ ನೀಡುತ್ತಾನೆ ಯಾವುದೇ ಮನುಷ್ಯನ ತಾಯಿ ಮನುಷ್ಯಳೇ ಆಗಲು ಸಾಧ್ಯ ಎಂದು ವಿವರಿಸಲಾಗಿತ್ತೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News