×
Ad

ಎಲ್ಲರ ನೆಚ್ಚಿನ ‘ಜಂಗಲ್ ಜಂಗಲ್ ಪತಾ ಚಲಾ ಹೈ, ಫಿರ್ ಆ ರಹಾ ಹೈ !

Update: 2016-03-22 16:09 IST

ಮುಂಬೈ : ‘‘ಜಂಗಲ್ ಜಂಗಲ್ ಬಾತ್ ಚಲಿ ಹೈ, ಪತಾ ಚಲಾ ಹೈ... ಚಡ್ಡಿ ಪೆಹೆನ್ ಕೆ ಫೂಲ್ ಖಿಲಾ ಹೈ, ಫೂಲ್ ಖಿಲಾ ಹೈ,’’90ರದಶಕದಲ್ಲಿ ನಮ್ಮ ಟಿವಿ ಪರದೆಯ ಮೇಲೆ ನಾವು ನೋಡುತ್ತಿದ್ದ ಕಾರ್ಟೂನ್ ಶೋ ‘ದಿ ಜಂಗಲ್ ಬುಕ್’ ಯಾರಿಗಿಷ್ಟವಿಲ್ಲ ಹೇಳಿ?. ‘ಜಂಗಲ್ ಜಂಗಲ್ ಬಾತ್ ಚಲೀ ಹೈ’ ಈಗ ಮತ್ತೆ ನಮ್ಮನ್ನು ಮನರಂಜಿಸಲು ಬರುತ್ತಿದೆ-ಎನಿಮೇಶನ್ ರೂಪದಲ್ಲಲ್ಲ ಬದಲಾಗಿ ಪೂರ್ಣಪ್ರಮಾಣದ ಚಲನಚಿತ್ರದ ರೂಪದಲ್ಲಿ.

ರುಡ್ಯರ್ಡ್ ಕಿಪ್ಲಿಂಗ್ ಅವರ ಮೂಲ ಕೃತಿ ‘ದಿ ಜಂಗಲ್ ಬುಕ್’ ಜಾನ್ ಫಾವ್ರಿಯೋ ಕೈಚಳಕದಲ್ಲಿ ಚಿತ್ರರೂಪದಲ್ಲಿ ಮುಂದಿನ ತಿಂಗಳು ಹೊರಬರುವಾಗ ಅದರಲ್ಲಿ ಸ್ಕಾರ್ಲೆಟ್ ಜೊಹಾನ್ಸನ್, ಬಿಲ್ ಮುರ್ರೇ, ಬೆನ್ ಕಿಂಗ್ಸ್ಲೆಯವರನ್ನೊಳಗೊಂಡತಾರಾಗಡಣವೇ ಇರುತ್ತದೆ. ಅದರ ಹಿಂದಿ ಅವತರಣಿಕೆಯಲ್ಲಿ ಪ್ರಿಯಾಂಕ ಛೋಪ್ರ, ಇರ್ಫಾನ್ ಖಾನ್ ಹಾಗೂ ನಾನಾ ಪಾಟೇಕರ್ ಇದ್ದರೆ ಮೋಗ್ಲಿ ಪಾತ್ರದಲ್ಲಿ ನೀಲ್ ಸೇಠ್ ಕಾಣಿಸಿಕೊಳ್ಳಲಿದ್ದಾರೆ.

ಹಲವು ಬಾಲ ಕಲಾವಿದರಿರುವ ಈ ಚಿತ್ರದ ಮೂಲ ಹಾಡಿಗೆ ಹೊಸ ಟ್ರ್ಯಾಕನ್ನು ಇತ್ತೀಚೆಗೆ ಗುಲ್ಜಾರ್ ಮತ್ತು ವಿಶಾಲ್ ಭಾರಧ್ವಾಜ್ ರೆಕಾರ್ಡಿಂಗ್ ಮಾಡಿದ್ದಾರೆ.ಈ ಹಾಡಿನ ಟ್ರ್ಯಾಕ್‌ನ ವೀಡಿಯೋದಲ್ಲಿ ಸ್ಟುಡಿಯೋದಲ್ಲಿ ಗುಲ್ಜಾರ್ ಹಾಗೂ ಭಾರಧ್ವಾಜ್ ಬಾಲಕಲಾವಿದರೊಂದಿಗೆ ಕಾಣಿಸುತ್ತಾರಲ್ಲದೆ ಚಿತ್ರದ ಕೆಲವು ದೃಶ್ಯಗಳನ್ನೂ ತೋರಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಹಿಂದಿ ಅವತರಣಿಕೆಯಲ್ಲಿ ಈ ಹಾಡು ಇದೆಯೇ ಅಥವಾ ಇಲ್ಲವೇ, ಕೇವಲ ಪ್ರಮೋಶನ್‌ಗಾಗಿ ಟ್ರ್ಯಾಕ್ ಸಿದ್ಧಪಡಿಸಲಾಗಿದೆಯೇ ಎಂಬುದನ್ನು ಚಿತ್ರ ತಂಡ ದೃಢಪಡಿಸಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News