ಬಹುಮತವಿಲ್ಲದಿದ್ದರೂ ಆಗಸ್ಟ್‌ನಲ್ಲಿ ಎನ್‌ಡಿಎಗೆ ರಾಜ್ಯಸಭೆಯ ಹಿಡಿತ ?
ಹೊಸದಿಲ್ಲಿಮಾ22 : ಕೇಂದ್ರದ ಎನ್‌ಡಿಎ ಸರಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಆಗಸ್ಟ್ ತಿಂಗಳ ನಂತರ ಅದು ರಾಜ್ಯಸಭೆಯಲ್ಲೂ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳಿಗಿಂತಉತ್ತಮ ಸ್ಥಿತಿಯಲ್ಲಿರಬಹುದು.
ತನ್ನ ಆಡಳಿತಾವಧಿ 2019ರಲ್ಲಿ ಮುಗಿಯುವ ತನಕ ಆಡಳಿತಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ ಸಿಗುವುದು ಕನಸೇ ಸರಿ ಆದರೂ ಅದು ಹಲವಾರು ಪ್ರಮುಖ ಮಸೂದೆಗಳಿಗೆ ಪ್ರಾದೇಶಿಕ ಪಕ್ಷಗಳ ಸಹಾಯದಿಂದ ಅನುಮೋದನೆ ಪಡೆಯಬಹದು.
ಸೋಮವಾರ ರಾಜ್ಯ ಸಭೆಯ 13 ಸೀಟುಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ 245 ಸದಸ್ಯರಿರುವ ಸದನದಲ್ಲಿ ಕಾಂಗ್ರೆಸ್‌ನ ಬಲ 65ಕ್ಕೆ ಏರಿದರೆ,ಬಿಜೆಪಿಯ ಸದಸ್ಯರ ಸಂಖ್ಯೆ 47ಕ್ಕೆ ಇಳಿದಿದೆ.
ಆದರೆ ಮುಂದಿನ ಆಗಸ್ಟ್ 1ಕ್ಕೆ ಖಾಲಿ ಬೀಳಲಿರುವ 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದ ನಂತರ ಬಿಜೆಪಿ ಮೇಲ್ಮನೆಯಲ್ಲಿ ತನ್ನ ಸ್ಥಿತಿಯನ್ನು ಸುಧಾರಿಸಬಹುದಾಗಿದೆ. ಆಗಸ್ಟ್ ನಂತರ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲ 61ಕ್ಕೆ ಇಳಿಯಲಿದೆಯೆಂದೂ ಪಕ್ಷಆಂಧ್ರ ಪ್ರದೇಶದಲ್ಲಿ ಎರಡು ಸ್ಥಾನಗಳಲ್ಲಿ ಸೋಲುವ ಸಾಧ್ಯತೆಯಿದ್ದರೆ. ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಒಂದು ಸ್ಥಾನದಲ್ಲಿ ಸೋಲಲಿದೆ ಹಾಗೂ ಕರ್ನಾಟಕದಲ್ಲಿ ಒಂದು ಸ್ಥಾನ ಪಡೆಯಲಿದೆಯೆಂದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ಅತ್ತ ಬಿಜೆಪಿಯ ಒಟ್ಟು ಸದಸ್ಯ ಬಲ 48ಕ್ಕೆ ಏರಲಿದೆಯೆಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಎರಡು ಹಾಗೂ ಬಿಹಾರದಲ್ಲಿ ಒಂದು ಸೀಟು ಅದು ಗೆದ್ದರೆ ಕರ್ನಾಟಕ ಹಾಗೂ ಉತ್ತರಾಖಂಡದಲ್ಲಿ ತಲಾ ಒಂದು ಸ್ಥಾನದಲ್ಲ ಸೋಲಲಿದೆಯೆಂದು ಅಂದಾಜಿಸಲಾಗಿದೆ.
ಸರಕಾರವು ಪ್ರಾದೇಶಿಕ ಪಕ್ಷಗಳ ನಾಯಕರನ್ನು ಇದೇ ಕಾರಣಕ್ಕಾಗಿ ಓಲೈಸುತ್ತಿದೆಯೆನ್ನಲಾಗಿದ್ದು.ಬಜೆಟ್ ಅಧಿವೇಶನದ ಪ್ರಥಮಾರ್ಧದಲ್ಲಿಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಆಧಾರ್ ತಿದ್ದುಪಡಿ ಮಸೂದೆ ಮಂಡಿಸಿದಾಗ ಟಿಎಂಸಿ, ಬಿಜೆಡಿ, ಎಸ್‌ಪಿ ಹಾಗೂ ಬಿಎಸ್‌ಪಿ ಸದನದಿಂದ ಹೊರ ನಡೆದಿರುವುದು ವಿಪಕ್ಷದಲ್ಲಾಗಿರುವ ಒಡಕನ್ನು ಸೂಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.