×
Ad

ಮಂಗಳೂರು : ಆಪ್ತ ಸಮಾಲೋಚನೆ ತರಬೇತಿ ಕಾರ್ಯಗಾರದ ಉದ್ಘಾಟನೆ

Update: 2016-03-22 17:18 IST

         
       ಮಂಗಳೂರು, ಮಾ. 22: ದೇರಳಕಟ್ಟೆಯ ಯೆನೆಪೋಯ ವಿಶ್ವದ್ಯಾನಿಲಯದ ವೈದ್ಯಕೀಯ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಸಮಾಜಕಾರ್ಯ ಪದವಿ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಸಮಾಜಕಾರ್ಯರ್ತರುಗಳಿಗೆ ಹಮ್ಮಿಕೊಂಡ 3 ದಿನಗಳ ಆಪ್ತ ಸಮಾಲೋಚನ ತರಬೇತಿ ಕಾರ್ಯಗಾರವನ್ನು ಸೋಮವಾರದಂದು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಭಾಂಗಣದಲ್ಲಿ ಯೆನೆಪೋಯ ವಿಶ್ವದ್ಯಾನಿಲಯದ ಕುಲಸಚಿವರಾದ ಡಾ ಸಿ. ರಘುವೀರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಪ್ತಸಮಾಲೋಚನೆ ಒಂದು ಕಲೆ ಆಗಿದೆ, ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಈ ಕೌಶಲ್ಯದ ಅಗತ್ಯ ಇದೆ. ವ್ಯಕ್ತಿಯು ಸಮಸ್ಯೆಯಲ್ಲಿ ಜರ್ಝರಿತನಾಗಿ ಸಹಾಯ ನಿರೀಕ್ಷಸಲು ಬಂದಾಗ ಅವರನ್ನು ಸ್ವೀಕರಿಸುವುದು ಮತ್ತು ಅದರ ಸಮಸ್ಯೆಯ ಬಗ್ಗೆ ಆಲಿಸುವುದು ಆಪ್ತಸಮಾಲೋಚನೆಯ ಒಂದು ಪ್ರಮುಖ ಘಟ್ಟವಾಗಿದೆ. ಇಂದಿನ ಜಗತಿನಲ್ಲಿ ಎಲ್ಲರೂ ತಮ್ಮ ಕಾರ್ಯ ಬಾಹುಳ್ಯದಿಂದಾಗಿ ಒತ್ತಡಕ್ಕೆ ಒಳಗಾಗುತ್ತಿದ್ದು ಇಂತಹ ಸೂಕ್ಷ್ಮ ವಿಷಯಗಳಿಗೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಸಮಾಜ ಕಾರ್ಯಕರ್ತರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರ ಕೌಶಲ್ಯ ವೃಧ್ಧಿಗಾಗಿ ಇಂತಹ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು ಅತೀ ಸೂಕ್ತ ಎಂದು ಹೇಳಿದರು.
  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯೆನೆಪೋಯ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಪದ್ಮಕುಮಾರ್ ಆಪ್ತ ಸಮಾಲೋಚನಾ ಕಾರ್ಯಗಾರದ ಸಂಘಟನೆ ಅತೀ ಸಮಂಜಸವಾದದ್ದು ಎಂದು ಶುಭ ಹಾರೈಸಿದರು. ಮೂರು ದಿನಗಳ ಕಾರ್ಯಗಾರದ ಮುಖ್ಯ ತರಬೇತಿದಾರರಾದ ಡಾ ಲವೀನಾ ನೊರೋನ್ಹ ಕಾರ್ಯಗಾರದ ಧ್ಯೇಯ ಹಾಗೂ ಕಲ್ಪನೆ ಬಗ್ಗೆ ಮಾಹಿತಿ ನೀಡಿದರು.

    ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಮೆಡಿಕಲ್ ಕಾಲೇಜಿನ ಅರಿವಳಿಕೆ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಪದ್ಮನಾಭ ಸಂಪತ್ತಿಲ ಮಾತನಾಡಿ ಭೌತಿಕ ಒತ್ತಡವನ್ನು ಕಡಿಮೆ ಗೊಳಿಸುವಷ್ಟೇ ಮಾನಸಿಕ ಒತ್ತಡವನ್ನು ಕಡಿಮೆಮಾಡುವುದು ಅಗತ್ಯ. ಮಾನಸಿಕ ಒತ್ತಡವನ್ನು ಹಾಗೆಯೇ ಮುಂದುವರಿಯಲು ಬಿಟ್ಟರೆ ಅದು ಅಪಾಯಕಾರಿಯಾದೀತು. ಸಮಾಜ ಕಾರ್ಯಕರ್ತರು ಆಪ್ತ ಸಮಾಲೋಚನೆ ವಿಧಾನ ಮೂಲಕ ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಶಕ್ತರಾಗಿದ್ದಾರೆ ಎಂದು ಹೇಳಿದರು.

  ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ ಮಹಮ್ಮದ್ ಗುತ್ತಿಗಾರ್ ಸ್ವಾಗತಿಸಿದ್ದು, ಸಹಾಯಕ ಪ್ರಾಧ್ಯಾಪಕರಾದ ಡಾ ಗ್ಲಾಡೀಸ್ ಕೊಲಾಸೊ ವಂದಿಸಿದರು. ಸಮಾಜಕಾರ್ಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಕು. ಮೈನಾಝ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News