ಮಂಗಳೂರು : ಕರಾವಳಿಯಲ್ಲಿ ಹೆಚ್ಚುತ್ತಿರುವ ತಾಪಮಾನ
ಮಂಗಳೂರು,ಮಾ.22: ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ನಿರಂತರವಾಗಿ ಏರಿಕೆಯಾಗಿದ್ದು ಮಾ.22 ರಂದು ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತವರಣದಿಂದ ಉಷ್ಠಾಂಶದಲ್ಲಿ ಏರಿಕೆಯಾಗಿದೆ.ಪರಿಣಾಮ ಜನರು ಬಿಸಿಲಿನ ಬೇಗೆ ತಡೆಯಲಾಗದೆ ನೆರಳು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಜಿಲ್ಲೆಯಾದ್ಯಂತ ಗ್ರಾಮಾಂತರ ಪ್ರದೇಶದಲ್ಲೂ ಜಲಮೂಲಗಳು ಬಿಸಿಲಿನ ತಾಪಮಾನದಿಂದ ಬರಿದಾಗಿದ್ದು ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ.
ಕಳೆದ ತಿಂಗಳಿನಿಂದ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಿದ್ದು ಮಾರ್ಚ್ ತಿಂಗಳಲ್ಲಿ 34 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಚ್ಣಾಂಶ ದಾಖಲಾಗಿದೆ. ಮಾ.14 ರಂದು ಗರಿಷ್ಟ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಸ ದಾಖಲಾಗಿದೆ. ಮಾ.21 ರಂದು 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಜಿಲ್ಲೆಯಲ್ಲಿ ಬಿಸಿಲ ಬೇಗೆ ತಡೆಯಲಾರದೆ ಸಾರ್ವಜನಿಕರು ಸಾಕಷ್ಟು ಸಂಕಟ ಅನುಭವಿಸುತ್ತಿದ್ದು ಮಕ್ಕಳು, ಹಿರಿಯರಂತೂ ಸಾಕಷ್ಟು ಪಾಡು ಪಡುತ್ತಿದ್ದಾರೆ. ಬಿಸಿಲ ಬೇಗೆ ರಸ್ತೆ ಬದಿ ನಡೆದುಕೊಂಡು ಹೋಗುವವರು ಕೊಡೆಯನ್ನು ಹಿಡಿದು ತಿರುಗಾಡುತ್ತಿರುವ ದೃಶ್ಯ ಮಂಗಳೂರು ನಗರದಲ್ಲಿ ಸಾಮಾನ್ಯವಾಗಿದೆ. ಮಕ್ಕಳು ತಂಪು ಪಾನೀಯ, ಎಳನೀರು, ಕಲ್ಲಂಗಡಿ, ಕಬ್ಬಿನ ಹಾಲು ಕುಡಿದು ಬಿಸಿಲ ಬೇಗೆಗೆ ದಣಿವಾರಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.