ರಾಮ್ ದೇವ್ ರ ಪತಂಜಲಿ ವಿರುದ್ಧ ನ್ಯಾಯಾಲಯಕ್ಕೆ ಹೋದ ಇಮಾಮಿ
Update: 2016-03-22 17:49 IST
ಕೋಲ್ಕತ್ತಾ , ಮಾ. 22 : ಖ್ಯಾತ ಕಂಪೆನಿ ಇಮಾಮಿ ಬಾಬಾ ರಾಮದೇವ್ ಪ್ರಾಯೋಜಕತ್ವದ ಪತಂಜಲಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದೆ. ತನ್ನ ಕೇಶ್ ಕಿಂಗ್ ಉತ್ಪನ್ನದ ವಿನ್ಯಾಸ ಹಾಗು ಟ್ರೇಡ್ ಮಾರ್ಕ್ ಅನ್ನು ಪತಂಜಲಿ ಕಾಪಿ ಮಾಡಿದೆ ಎಂದು ಇಮಾಮಿ ಆರೋಪಿಸಿದೆ.
ಪತಂಜಲಿ ಇತ್ತೀಚಿಗೆ ಕೇಶ್ ಕಾಂತಿ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು ಅದು ತನ್ನ ಕೇಶ್ ಕಿಂಗ್ ಉತ್ಪನ್ನದ ಕಾಪಿ ಆಗಿದೆ ಎಂದು ಇಮಾಮಿ ದೂರಿದೆ. ಈ ದೂರಿನಲ್ಲಿ ಪ್ರಾಥಮಿಕವಾಗಿ ಸತ್ಯವಿದೆ ಎಂದು ಹೇಳಿರುವ ನ್ಯಾಯಾಲಯ ತನ್ನ ಹೊಸ ಉತ್ಪನ್ನವನ್ನು ೧೦ ವಾರಗಳ ಕಾಲ ಮಾರಾಟ ಮಾಡದಂತೆ ಪತಂಜಲಿಗೆ ಹೇಳಿದೆ.
" ಈ ನ್ಯಾಯಾಲಯಕ್ಕೆ ಪ್ರಾಥಮಿಕವಾಗಿ ವಿನ್ಯಾಸದ ನಕಲು ನಡೆದಿರುವುದನ್ನು ಗಮನಿಸಿದೆ. ಹಾಗಾಗಿ ಇಂತಹ ನಕಲಿನ ವಿರುದ್ಧ ರಕ್ಷಣೆ ನೀಡಬೇಕಾಗಿದೆ " ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿರುವ ನ್ಯಾ. ಹರೀಶ್ ಟಂಡನ್ ಪ್ರಕರಣವನ್ನು ಮೂರು ವಾರಗಳ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.