ಬಪ್ಪನಾಡು : ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವ
Update: 2016-03-22 18:06 IST
ಮುಲ್ಕಿ, ಮಾ.22: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವದ ಅಂಗವಾಗಿ ಮಂಗಳವಾರ ದ್ವಜಾರೋಹಣ ನಡೆಯಿತು.
ಈ ಸಂದರ್ಭ ಸಂದರ್ಭ ಶ್ರೀ ಸಸಿಹಿತ್ಲು ಭಗವತಿ ಮತ್ತು ಪರಿವಾರ ಶಕ್ತಿಗಳೊಂದಿಗೆ ಶ್ರೀ ದುರ್ಗಾಪರಮೇಶ್ವರೀ ಭೇಟಿ ಉತ್ಸವ ಜರುಗಿತು. ಈ ಸಂದರ್ಭ ಸಾವಿರಾರು ಮಂದಿ ಭಕ್ತರು ಭಾಗವಹಿಸಿ ಪುನೀತರಾದರು.
ಇಂದಿನಿಂದ 29 ತಾರೀಕಿನ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, 28 ರಂದು ಮದ್ಯಾಹ್ನ ಹಗಲು ರಥೋತ್ಸವ ರಾತ್ರಿ ಉತ್ಸವ ಬಲಿ ಶಯನೋತ್ಸವ 29 ಮಂಗಳವಾರ ಬೆಳಗ್ಗೆ 7.30 ಕ್ಕೆ ಕವಾಟೋದ್ಘಾಟನೆ ರಾತ್ರಿ 7 ಗಂಟೆಗೆ ಬಲಿ ಓಕುಳಿ. ಶ್ರೀ ದೇವಿ ಮತ್ತು ಭಗವತಿಯವರ ಭೇಟಿ ಮಹಾರಥೋತ್ಸವ ಅವಭ್ರತ ದ್ವಜಾರೋಹಣ ನಡೆಯಲಿದೆ.