ಕಡಬ : ಅಕ್ರಮ ದನ ಸಾಗಾಟದ ಪತ್ತೆ
Update: 2016-03-22 18:40 IST
ಕಡಬ: ಠಾಣಾ ವ್ಯಾಪ್ತಿಯ ಮರ್ಧಾಳ ಎಂಬಲ್ಲಿ ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಘಟನೆಯನ್ನು ಪತ್ತೆ ಹಚ್ಚಿರುವ ಕಡಬ ಪೊಲೀಸರು ವಾಹನವನ್ನು ವಶಕ್ಕೆ ತೆಗೆದುಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸುಳ್ಯ ತಾಲೂಕಿನ ಅರಂತೋಡಿನಿಂದ ಬೆಳ್ತಂಗಡಿಗೆ ೩ ಹೋರಿಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮರ್ಧಾಳ ಎಂಬಲ್ಲಿ ತಡೆಹಿಡಿದ ಕಡಬ ಪೊಲೀಸರು ವಾಹನ ಸಹಿತ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.