×
Ad

ಕೊಣಾಜೆ :ವಿಶ್ವಜಲ ದಿನಾಚರಣೆಯ ಅಂಗವಾಗಿ ಪಿ.ಎ.ಕಾಲೇಜಿನ ವಿದ್ಯಾರ್ಥಿಗಳಿಂದ ನೀರಿಗಾಗಿ ನಡಿಗೆ ಕಾರ್ಯಕ್ರಮ

Update: 2016-03-22 18:57 IST

 ಕೊಣಾಜೆ: ವಿಶ್ವ ಜಲ ದಿನಾಚರಣೆಯ ಅಂಗವಾಗಿನೀರಿಲ್ಲದಿದ್ದರೆ ನಾವಿಲ್ಲ ಎಂಬ ಘೋಷಣೆಯೊಂದಿಗೆಪಿ.ಎ. ತಾಂತ್ರಿಕ ಮಹಾವಿದ್ಯಾಲಯದ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು
ಮಂಗಳವಾರ  ಕಾಲೇಜಿನ ಮುಖ್ಯ ದ್ವಾರದಿಂದ ಮುಖ್ಯ ರಸ್ತೆಯವರೆಗೆ ನೀರಿಗಾಗಿ ನಡಿಗೆ ಎಂಬ ಧ್ಯೇಯದೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿ ಪರಿಸರದ ನಾಗರಿಕರಿಗೆ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಜಾಥಾ ಕಾರ್ಯಕ್ರಮದ ಬಳಿಕ ಪಿ.ಎ.ಕಾಲೇಜಿನ ಸಭಾಂಗಣದಲ್ಲಿನೀರಿನ ಜಾದೂಗಾರ ಎಂದೇ ಪ್ರಸಿದ್ದರಾಗಿರುವಅಯ್ಯಪ್ಪ ಮಾಸಾಗಿಯವರುನೀರಿನ ಇಂಗುವಿಕೆ ಹಾಗೂ ನೀರಿನ ಅವಶ್ಯಕತೆ ಬಗ್ಗೆ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿಪಿ.ಎ. ತಾಂತ್ರಿ ಮಹಾವಿದ್ಯಾಲಯದ ಪ್ರಾಂಶುಪಾಲ
ಡಾ. ಅಬ್ದುಲ್ ಶರೀಫ್, ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಸರ್ಫರಾಜ್ ಹಾಶೀಮ್ ಜೆ., ಸಿವಿಲ್ ವಿಭಾಗದ ಮುಖ್ಯಸ್ಥರು ಹಾಗೂ ಭೋಧಕ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಬಳಿಕವಿಶ್ವ ಜಲ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಿತ್ತಿಪತ್ರ ರಚನೆ, ಕಲಾಕೃತಿ ರಚನೆ ಹಾಗೂ ಇತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕೊನೆಗೆ ನೀರಿನ ಉಳಿವಿನ ಬಗ್ಗೆ ಚುಟುಕು ನಾಟಕ ಪ್ರದರ್ಶಿಸಲಾಯಿತು. ಸಮಾರಂಭದಲ್ಲಿ ವಿಜೇತರಿಗೆ  ಅಯ್ಯಪ್ಪ ಮಾಸಾಗಿಯವರು ಬಹುಮಾನಗಳನ್ನು ವಿತರಿಸಿದರು. ಡಾ. ಆರ್. ಜಿ. ಡಿಸೋಜ, ಸಿವಿಲ್ ವಿಭಾಗದ ಮುಖ್ಯಸ್ಥರು ವಿಶ್ವಜಲ ದಿನಾಚರಣೆಯ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಕು. ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ವರ್ಕಿ ಅಭಿಲಾಷ್ ವಂದಾನಾರ್ಪಣೆ ನಡೆಸಿಕೊಟ್ಟರು. ಸಮಾರಂಭವನ್ನು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮೂಹ ಸಂಸ್ಥೆ ಪೋರ್ಸ್ (FORCE) ಅವರು ಏರ್ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News