×
Ad

ಮುಡಿಪು: ಸೂರಜ್ ವಿದ್ಯಾಸಂಸ್ಥೆಗೆ ಐಎಸ್‌ಒ 9001-2008 ಮಾನ್ಯತೆ

Update: 2016-03-22 19:17 IST

ಮಾ. 24ರಂದು ಬೇಕಲ ಇಬ್ರಾಹಿಂ ಮುಸ್ಲಿಯಾರ್‌ರಿಂದ ಪ್ರದಾನ ಕೊಣಾಜೆ:  ಮುಡಿಪುವಿನಲ್ಲಿ ಕಾರ್ಯಾಚರಿಸುತ್ತಿರುವ ಸೂರಜ್ ವಿದ್ಯಾ ಸಂಸ್ಥೆಗೆ ಅಂತರಾಷ್ಟ್ರಿೀಯ ಸರ್ಟಿಫಿಕೇಟ್ ಐಎಸ್‌ಒ 9001-2008 ಮಾನ್ಯತೆ ಲಭಿಸಿದ್ದು ಮಾ. 24ರಂದು ಸೂರಜ್ ಪದವಿಪೂರ್ವ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಪ್ರದಾನ ಮಾಡಲಿದ್ದಾರೆ ಎಂದು ಸೂರಜ್ ಸಮೂಹ ಸಂಸ್ಥೆಗಳ ಚೇರ್‌ಮೆನ್ ಡಾ. ಮಂಜುನಾಥ ಎಸ್. ರೇವಣ್ಕರ್ ಹೇಳಿದರು.

 ಮುಡಿಪುವಿನ ಸೂರಜ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾ ಇಲಾಖೆಯ ಅಕಾರಿ ಖಾದರ್ ಶಾ ಉದ್ಘಾಟಿಸಲಿದ್ದು ಸೂರಜ್ ವಿದ್ಯಾಸಂಸ್ಥೆಗೆ ಐಎಸ್‌ಒ ಮಾನ್ಯತೆ ಲಭಿಸಿದ್ದು ಸಂಸ್ಥೆಯ ಕಾರ್ಯದಕ್ಷತೆಗೆ ಗರಿ ಮೂಡಿಸಿದೆ ಎಂದರು. ಸೂರಜ್ ಶಿಕ್ಷಣ ಸಂಸ್ಥೆ ಶೈಕ್ಷಣಿಕವಾಗಿ ಮಾಡಿದ ಸಾಧನೆಗೆ ಅಮೇರಿಕಾದಿಂದ ಡಾಕ್ಟರೇಟ್ ಹಾಗೂ ರಾಜ್ಯ ಸರಕಾರದಿಂದಲೂ ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ. 2016-17ರ ಸಾಲಿನಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಆರಂಭವಾಗಲಿದ್ದು ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ತಿಳಿಸಿದರು.
  ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸರಳ ರೀತಿಯಲ್ಲಿ ಬೋಸಲಾಗುತ್ತಿದೆ. ಉಪನ್ಯಾಸಕರಿಗಾಗಿ ಬಂದಿರುವ ನೂರಾರು ಅರ್ಜಿಗಳಲ್ಲಿ ತಮ್ಮ ಮಕ್ಕಳಿಗೆ ಯಾರು ಅರ್ಹ ಉಪನ್ಯಾಸಕರು ಎಂದು ಪೋಷಕರೇ ಆರಿಸುವ ಅಕಾರ ನೀಡಿದ್ದು ಆಯ್ಕೆ ಪ್ರಕ್ರಿಯೆ ಮುಗಿದಿದೆ. ಪೋಷಕರೇ ಶಿಕ್ಷಕರನ್ನು ಆರಿಸುವ ಯೋಜನೆ ಖಾಸಗಿ ಕಾಲೇಜುಗಳ ಮಟ್ಟಿಗೆ ಇದೊಂದು ಮಾದರಿ ಪ್ರಯತ್ನ ಎಂದರು.
  
 ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಪೋಷಕರು ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಬಹಳಷ್ಟು ಶ್ರಮಿಸುತ್ತಿದ್ದಾರೆ. ಸೂರಜ್ ವಿದ್ಯಾ ಸಂಸ್ಥೆ ಶೈಕ್ಷಣಿಕ ಗುಣಮಟ್ಟ ಕಾಪಾಡುವಲ್ಲಿ ಎಂದಿಗೂ ರಾಜಿಮಾಡಿಕೊಂಡಿಲ್ಲ. ಕನಿಷ್ಠ ಶುಲ್ಕ ವಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೂ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುತ್ತಿದೆ. ಅತ್ಯಾಧುನಿಕ ವಿಜ್ಞಾನ ಹಾಗೂ ಕಂಪ್ಯೂಟರ್ ಲ್ಯಾಬ್ ನಿರ್ಮಿಸಲಾಗಿದೆ. ನೂತನ ಕಂಪ್ಯೂಟರ್ ಲ್ಯಾಬ್‌ನ್ನು ಮುಡಿಪು ಸಂತ ಜೋಸೆಫರ ವಾಜ್ ಚರ್ಚ್‌ನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಹಾಗೂ ವಿಜ್ಞಾನ ಲ್ಯಾಬ್‌ನ್ನು ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಪಿ.ಎಲ್. ಧರ್ಮ ಉದ್ಘಾಟಿಸುವರು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಐಎಸ್‌ಒ ಕನ್ಸಲ್ಟೆಂಟ್ ಪಿ. ಮನೋಹರ್ ಪ್ರಭು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಎ.ಎ.ಹೈದರ್ ಪರ್ತಿಪ್ಪಾಡಿ, ಭಾಸ್ಕರ ರೈ ಕುಕ್ಕುವಳ್ಳಿ, ನವೀನ್ ಪಾದಲ್ಪಾಡಿ, ಮಹೇಶ್ ಚೌಟ, ಪ್ರಶಾಂತ್ ಗಟ್ಟಿ, ರಾಮಕೃಷ್ಣ ಸಾಮನಿ, ದಿನಕರ ಎ, ಸೂಫಿಕುಂಞ, ಪುತ್ತು ಬಾವಾ ಹಾಜಿ, ದೇವಿಪ್ರಸಾದ್ ಪೊಯ್ಯತ್ತಾಯ ಹಾಗೂ ಸೂರಜ್ ಪದವಿಪೂರ್ವ ಕಾಲೇಜಿನ ಕನ್ಸಲ್ಟೆಂಟ್ ಗಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News