ಸೂ ಕಿ ಮ್ಯಾನ್ಮಾರ್‌ನ ವಿದೇಶ ಸಚಿವೆ
Update: 2016-03-22 23:30 IST
ನೇಪ್ಯಿಡೊ, ಮಾ. 22: ಹಿಂದಿನ ಸೇನಾ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಮ್ಯಾನ್ಮಾರ್‌ನ ಅಧ್ಯಕ್ಷೆಯಾಗದಂತೆ ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯನ್ನು ತಡೆದರೇನಂತೆ! ಅವರು ನೂತನ ಸರಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಲಿದ್ದಾರೆ. ಈ ವಿಷಯವನ್ನು ಅವರ ಪಕ್ಷ ಮಂಗಳವಾರ ಘೋಷಿಸಿದೆ. ನೂತನ ಅಧ್ಯಕ್ಷರ ಮೇಲಿನಿಂದ ತಾನು ದೇಶವನ್ನು ಆಳುವುದಾಗಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಈಗಾಗಲೇ ಘೋಷಿಸಿದ್ದಾರೆ. ಅಧ್ಯಕ್ಷ ಹಟಿನ್ ಕ್ಯಾವ್ ನೇತೃತ್ವದ ನೂತನ ನಾಗರಿಕ ಸರಕಾರ ಮುಂದಿನ ವಾರ ಅಸ್ತಿತ್ವಕ್ಕೆ ಬರಲಿದೆ.