ಸಾಮೂಹಿಕ ಅತ್ಯಾಚಾರ: ಮೂವರ ಸೆರೆ
Update: 2016-03-22 23:47 IST
ಸುಳ್ಯ, ಮಾ.22: ಬಾಳಿಲ ಗ್ರಾಮದ ಅಯ್ಯನಕಟ್ಟೆ ಸಮೀಪದ ಶಾಲೆಯೊಂದರ ಬಳಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಎಎಸ್ಪಿ ರಿಷ್ಯಂತ್ ನೇತೃತ್ವದಲ್ಲಿ ಸೋಮವಾರ ಸುಳ್ಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಳಂಜದ ವರುಣ್, ಕೇಶವ ಮತ್ತು ಹರೀಶ್ ಆರೋಪಿಗಳು. ಅತ್ಯಾಚಾರದ ವಿಚಾರವನ್ನು ಯುವತಿ ಮನೆಯವರ ಗಮನಕ್ಕೆ ತಂದಿದ್ದರು. ರವಿವಾರ ರಾತ್ರಿ ಮನೆ ಮಂದಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಆರೋಪಿಗಳು ಯುವತಿಯನ್ನು ಮನೆಯಿಂದ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿಯ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.