ಚುನಾವಣೆ ಗೆದ್ದ ಬಿಲ್ಲವ ಸಮುದಾಯದ ಪ್ರತಿನಿಧಿಗಳಿಗೆ ಅಭಿನಂದನೆ
ಬಂಟ್ವಾಳ, ಮಾ.22: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾ ದಿನಾ ಚರಣೆ, ಗುರುಪೂಜೆ, ಸತ್ಯನಾರಾಯಣ ಪೂಜೆ ಹಾಗೂ ಚುನಾವಣೆಯಲ್ಲಿ ವಿಜೇತ ರಾದ ಬಿಲ್ಲವ ಸಮುದಾಯದ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡು ಗಾಣದಪಡ್ಪು ಬಿಲ್ಲವ ನಾರಾಯಣ ಗುರು ಸಮಾಜ ಭವನದಲ್ಲಿ ನಡೆಯಿತು. ಕಳೆದ ಚುನಾವಣೆಯಲ್ಲಿ ವಿಜೇತರಾದ ಜಿಪಂ ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ತಾಪಂ ಸದಸ್ಯರಾದ ಕೆ.ಸಂಜೀವ ಪೂಜಾರಿ ಬೊಳ್ಳಾಯಿ, ಚಂದ್ರಹಾಸ ಕರ್ಕೇರ, ರಮೇಶ ಪೂಜಾರಿ ಕುಡ್ಮೇರು, ಧನಲಕ್ಷ್ಮೀ ಸಿ.ಬಂಗೇರ, ಸಪ್ನಾ ವಿ. ಪೂಜಾರಿ, ಸವಿತಾ ಹೇಮಂತ್ ಕರ್ಕೇರ, ಯಶವಂತ ಪೂಜಾರಿ ಪೊಳಲಿ, ಗಣೇಶ ಸುವರ್ಣ ತುಂಬೆ, ಶಿವಪ್ರಸಾದ್ ಕನಪಾಡಿ, ಪದ್ಮಾವತಿ ಬಿ. ಪೂಜಾರಿ, ನವೀನ್ ಪೂಜಾರಿ ಪಾದಲ್ಪಾಡಿ, ಗೀತಾ ಚಂದ್ರಶೇಖರ್ ಅವರನ್ನು ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಅಭಿನಂದಿಸಿದರು. ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್ ಪಾದೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಾವು ಧನಾತ್ಮಕವಾಗಿ ಚಿಂತಿಸುತ್ತಾ ಉತ್ತಮ ಕಾರ್ಯಗಳನ್ನು ನಡೆಸುತ್ತಾ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿವಂ ತಾಗಬೇಕು ಎಂದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ ಅಭಿನಂದನಾ ಭಾಷಣ ಮಾಡಿ ರಾಜಕೀಯ ವೌಲ್ಯ ಇಂದು ಕುಸಿಯುತ್ತಿದೆ. ದುಡ್ಡು, ಜಾತಿಬಲ ಇದ್ದವರಿಗೆ ಅಧಿಕಾರ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಾವು ದೇಶಭಕ್ತಿ ತತ್ವದಡಿಯಲ್ಲಿ ವೌಲ್ಯಯುತ, ಗುಣಮಟ್ಟದ ರಾಜ ಕೀಯದಿಂದ ಜನತೆಯ ಗೌರವಕ್ಕೆ ಪಾತ್ರ ರಾಗಬೇಕಾಗಿದೆ ಎಂದರು. ಸಂಘದ ಉಪಾಧ್ಯಕ್ಷ ರಾಘವ ಅಮೀನ್ ಮರಕಡ ಬೈಲು, ಜತೆ ಕಾರ್ಯದರ್ಶಿ ಶಂಕರ್ ಪೂಜಾರಿ ಕಾಯರ್‌ಮಾರ್ ಮೊದಲಾದವರಿದ್ದರು.
ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಸ್ವಾಗತಿಸಿದರು. ಕೋಶಾಧಿಕಾರಿ ಮಹಾಬಲ ಬಂಗೇರ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.