×
Ad

ರೂ. 100 ಕೋಟಿ ಕ್ಲಬ್‌ಗೆ ವಿರಾಟ್‌ ಕೊಹ್ಲಿ

Update: 2016-03-23 12:38 IST


ಮುಂಬೈ, ಮಾ.23 : ಭಾರತದ ಸ್ಟಾರ್‌ ಬ್ಯಾಟ್ಸ್‌ಮನ್‌, ಟೆಸ್ಟ್ ಕ್ರಿಕೆಟ್‌  ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಸಾಲಿನಲ್ಲಿ 100 ಕೋಟಿ ರೂ. ಆದಾಯ ಗಳಿಸುವ ಗಣ್ಯರ ಕ್ಲಬ್‌ಗೆ ಈಗಾಗಲೇ ಸೇರ್ಪಡೆಗೊಂಡಿದ್ದಾರೆ.
ವಿವಿಧ ಮೂಲಗಳಿಂದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ದೇಶದ ದೊಡ್ಡ ಕ್ರೀಡಾಪಟುವಾಗಿ ರೂಪುಗೊಳ್ಳುತ್ತಿರುವ ವಿರಾಟ್‌ ಕೊಹ್ಲಿ ವಿವಿಧ ಕಂಪೆನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಗರಿಷ್ಠ ಆದಾಯವನ್ನು ಬಾಚಿಕೊಳ್ಳುತ್ತಿದ್ದಾರೆ. ಟೀಮ್‌ ಇಂಡಿಯಾ ನಾಯಕ ಮಹೇಂದ್ರ ಸಿಂಗ್‌ ಧೋನಿ (1.8 ಮಿಲಿಯನ್ ಯುಎಸ್‌ ಡಾಲರ‍್ )ಅವರನ್ನು ಆದಾಯದಲ್ಲಿ ಮೀರಿಸುವ  ಹಾದಿಯಲ್ಲಿದ್ದಾರೆ ಕೊಹ್ಲಿ.
ಒಟ್ಟು 13 ಬ್ರಾಂಡ್ ಗಳಲ್ಲಿ ಅವರಿಗೆ  ಆದಾಯ ಸಂದಾಯವಾಗುತ್ತಿದೆ.  ಜಗದ್ವಿಖ್ಯಾತವಾದ ಕ್ರೀಡಾ ಸಾಮಗ್ರಿಗಳ ಉತ್ಪಾದನಾ ಕಂಪೆನಿ ಜರ್ಮನಿಯ ಅಡಿದಾಸ್  ಜಾಹೀರಾತು ಮೂಲಕ ವಾರ್ಷಿಕ 10ಕೋಟಿ ರೂ., ಎಂಆರ್‌ಎಫ್‌ 6.5  ಕೋಟಿ ರೂ, ಪೆಪ್ಸಿ, ಆಡಿ, ವಿಕ್ಸ್‌, ಬೂಸ್ಟ್‌, ಯುಎಸ್‌ಎಲ್‌, ಟಿವಿಎಸ್‌, ಸಾಮಾಶ್‌ ನಿತೇಶ್‌ ಎಸ್ಟೆಟ್ಸ್‌,ಟಿಸ್ಸಾಟ್ ಹರ್ಬಲ್‌ ಲೈಪ್‌ ಮತ್ತು ಕೋಲ್ಗೆಟ್  ಕಂಪೆನಿಗಳ ಜಾಹೀರಾತುಗಳಲ್ಲಿ ಕೊಹ್ಲಿ ಕೋಟಿಗಟ್ಟಲೆ ಆದಾಯ ಪಡೆಯುತ್ತಿದ್ದಾರೆ ಎಂದು  ಎಂದು ಇಕಾನಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News