×
Ad

ಮಾ. 24 : ಕೋಟೆಕೇರಿ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವ

Update: 2016-03-23 12:58 IST

ಮುಲ್ಕಿ, ಮಾ.23 : ಇಲ್ಲಿನ ಕೋಟೆಕೇರಿ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವವು ಮಾರ್ಚ್ 24 ರಂದು ಕೋಟೆಕೇರಿಯ ಯುವಕ ವೃಂದದ ವಠಾರದಲ್ಲಿ ಜರಗಲಿದೆ.

  ಸಂಜೆ ಜರಗಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್ ವಹಿಸಲಿದ್ದು ಕಾರ್ಯಕ್ರಮವನ್ನು ಮುಂಬೈ ನ ಸದಾಶಿವ ಶಾಂತಿ ಉದ್ಘಾಟಿಸಲಿದ್ದಾರೆ.

ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಲಿದ್ದು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮುಲ್ಕಿಯ ಕೆಥೋಲಿಕ್ ಚರ್ಚ್ ನ ಧರ್ಮ ಗುರು  ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಹೆಜಮಾಡಿ ಕೋಟೆ ಹೌಸ್ ಕೆಎಸ್ ಶೇಖಬ್ಬ ಹಾಗೂ ಯೋಗ ಗುರು ಕೆಂಚನಕೆರೆಯ ಯೋಗೋಪಾಸನದ ಜಯ ಮುದ್ದು ಶೆಟ್ಟಿ ಮುಖ್ಯ ಆತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾತ್ರಿ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ ಹಾಗೂ ನಾಟಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News