×
Ad

ಕಿನ್ನಿಗೋಳಿ: ಮಾ. 25ರಂದು ನುಡಿನಮನ ಕಾರ್ಯಕ್ರಮ

Update: 2016-03-23 13:05 IST

ಮುಲ್ಕಿ, ಮಾ.23: ಯಕ್ಷಗಾನ ಕಲಾರಂಗ ಉಡುಪಿ, ಯುಗಪುರುಷ ಕಿನ್ನಿಗೋಳಿ ಇವರ ವತಿಯಿಂದ ಅಪಾರ ಜನಪೀತಿಯನ್ನು ಗಳಿಸಿಕೊಳ್ಳುತ್ತ ಯಕ್ಷಗಾನ ರಂಗದಲ್ಲಿ ಪ್ರತಿಭಾನ್ವಿತ ಸ್ತ್ರೀ ವೇಷಧಾರಿಯಾಗಿ ಮೆರೆಯುತ್ತಿರುವಾಗಲೇ ಜೀವನರಂಗದಿಂದ ನಿರ್ಗಮಿಸಿದ ಅಶೋಕ ಕೊಲೆಕಾಡಿಯವರ ನುಡಿನಮನ ಕಾರ್ಯಕ್ರಮವು ಮಾ. 25ರಂದು ಸಂಜೆ ಗಂಟೆ 6ಕ್ಕೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಲಿದೆ.

ಅಧ್ಯಕ್ಷತೆಯನ್ನು ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಇವರು ವಹಿಸಲಿದ್ದಾರೆ. ಸಂಜಯಕುಮಾರ್ ಗೋಣಿಬೀಡು ಇವರು ಸಂಸ್ಮರಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಎಂ.ನಾರಾಯಣ ಸಪಳಿಗ, ದೇವಪ್ರಸಾದ ಪುನರೂರು, ಜೊಸ್ಸಿ ಪಿಂಟೋ ಉಪಸ್ಥಿತರಿರುವರು.

ಸಂಜೆ ಗಂಟೆ 5ರಿಂದ ಅಮರ ಕೋಟಿ ಚೆನ್ನಯ ಯಕ್ಷಗಾನ ತಾಲಮದ್ದಲೆ ಜರಗಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಯುಗಪುರುಷದ ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News