×
Ad

ಅಪಹರಣಕಾರ ಹಾಗು ಅಪಹೃತ ಒಬ್ಬನೇ !

Update: 2016-03-23 13:45 IST

ಹೊಸದಿಲ್ಲಿ, ಮಾ. 23 : ತಾನು ಅಪಹರಣ ಮಾಡಿದ ವ್ಯಕ್ತಿಯ ಮನೆಯವರ ಆರ್ಥಿಕ ಸಮಸ್ಯೆಗೆ ಮನಕರಗಿದ ಅಪಹರಣಕಾರರ ಬಗ್ಗೆ ನೀವು ಕೇಳಿದ್ದೀರಾ ? ಆದರೆ ಇಲ್ಲೊಬ್ಬ ಅಂತಹ ಮೃದು ಮನಸ್ಸಿನ ಅಪಹರಣಕಾರನ ಪ್ರಕರಣವಿದೆ. ಈತನ ಹೆಸರು ಮಹಿಪಾಲ್. ಆದರೆ ಈ ಪ್ರಕರಣದಲ್ಲಿ ಇನ್ನೂ ಒಂದು ವಿಶೇಷವಿದೆ. ಏನೆಂದರೆ, ಇಲ್ಲಿ ಅಪಹರಣಕಾರ ಹಾಗು ಅಪಹೃತ ಎರಡೂ ಈ ಮಹಿಪಾಲನೆ ! 

ತಾನು ಪ್ರೀತಿಸುತ್ತಿದ್ದವಳನ್ನು ಮದುವೆಯಾಗಲು ತನ್ನದೇ ಅಪಹರಣದ ನಾಟಕ ರೂಪಿಸಿ, ಕೊನೆಗೆ ತನ್ನ ತಂದೆಯ ಕಷ್ಟ ಅರಿತು, ಮದುವೆ ಹಾಗು ಹನಿಮೂನ್ ಖರ್ಚು ನೀಗಿಸಲು   ಬೇಡಿಕೆ ಮೊತ್ತ ಕಡಿಮೆ ಮಾಡಿ ಆ ಮೂಲಕ ಪೊಲೀಸರಿಗೆ ತಾನೇ ಸುಳಿವು ನೀಡಿ ಈಗ ಪೊಲೀಸ್  " ಮಾವನ ಮನೆ" ಸೇರಿದ ಕತೆಯಿದು. 

ಸೋಮವಾರ ಮುಂಜಾನೆ ಬ್ಯಾಂಕ್ ಉದ್ಯೋಗಿಯಾಗಿರುವ  ತನ್ನ ತಂದೆಗೆ ಕಾಲ್ ಮಾಡಿದ ಮಹಿಪಾಲ್, ನನ್ನನ್ನು ನಾಲ್ಕು ಮಂದಿ ಅಪಹರಿಸಿ ಕರೆದುಕೊಂಡು ಹೋಗುತ್ತಿದ್ದಾರೆ. ನೀವು ಒಂದು ಲಕ್ಷ ರೂಪಾಯಿ ಕೊಟ್ಟು ಬಿಡಿಸದಿದ್ದರೆ ಅವರು ನನ್ನನ್ನು ಕೊಂದು ಹಾಕುತ್ತಾರೆ . ಈಗಾಗಲೇ ಅವರು ನನ್ನ ಬ್ಯಾಂಕ್ ಅಕೌನ್ಟ್ ನಿಂದ ನಲವತ್ತು ಸಾವಿರ ರೂಪಾಯಿ ತೆಗೆದಿದ್ದಾರೆ ಎಂದು ಹೇಳಿದ. 

ಆದರೆ ಪೊಲೀಸರಿಗೆ ಇಡೀ ಪ್ರಕರಣ ವಿಚಿತ್ರವಾಗಿ ಕಂಡಿತು. ಅಪಹರಣ ಮಾಡಿದವರು ಕೇವಲ ಒಂದು ಲಕ್ಷ ರೂಪಾಯಿ ಕೇಳಿದ್ದು ಇದಕ್ಕೆ ಕಾರಣ. ಮಹಿಪಾಲನ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಆತನ ಖಾತೆಯಲ್ಲಿ ಹಲವು ಸಮಯದಿಂದ ಹಣವೇ ಇಲ್ಲದ್ದು ಕಂಡು ಬಂತು. 

ತಕ್ಷಣ ಪ್ರಕರಣ ದಾಖಲಿಸಿದ ಪೊಲೀಸರು ಆತನ ಮೊಬೈಲ್ ನಂಬರ್ ಜಾಡು ಹಿಡಿದು ಹೋದರು. ಆಗ ಆಟ ದಕ್ಷಿಣ ದಿಲ್ಲಿಯ ಶ್ರಿನಿವಾಸಪುರಿ ಎಂಬಲ್ಲಿ ಇದ್ದಾನೆ ಎಂದು ಗೊತ್ತಾಯಿತು. ಆತನ ಪ್ರೇಯಸಿಯ ನಂಬರ್ ಟ್ರ್ಯಾಕ್ ಮಾಡಿದಾಗ ಇಬ್ಬರು ಸತತ ಸಂಪರ್ಕದಲ್ಲಿದ್ದಾರೆ ಎಂದು ತಿಳಿಯಿತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ಮಾಡಿ ಮಹಿಪಾಲನನ್ನು ವಶಕ್ಕೆ ತಗೆದುಕೊಂಡು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News