×
Ad

ಫರಂಗಿಪೇಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಸದ ರಾಶಿ

Update: 2016-03-23 15:12 IST

ಫರಂಗಿಪೇಟೆ, ಮಾ. 23: ಪುದು ಗ್ರಾಮದ ಗಡಿಯ ಅರ್ಕುಳದ ಸೇತುವೆ ಮೇಲೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಕಸದ ರಾಶಿ ತುಂಬಿಕೊಂಡಿದ್ದು, ಅರ್ಕುಳದಿಂದ ದೈನಂದಿನ ಅಗತ್ಯಗಳಿಗಾಗಿ ಫರಂಗಿಪೇಟೆಗೆ ಬರುವವರಿಗೆ  ಕಸದ ರಾಶಿಯ ಸಮೀಪ ಮೂಕು ಮುಚ್ಚಬೇಕಿದ್ದು, ರೋಗ ಹರಡುವ ಶಂಕೆ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿ ಕಸ ಕಡ್ಡಿಗಳು ಘನ ತ್ಯಾಜ್ಯ ಹಾಕಬಾರದು, ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುವೂದು. ಹಾಗೂ ಯಾರಾದರೂ ಕಸ ಹಾಕುವುದು ಕಂಡು ಬಂದಲ್ಲಿ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆಗೆ ತಿಳಿಸಬೇಕು ಎಂದು ಸಾರ್ವಜನಿಕ ಬೋರ್ಡನ್ನು ಅಡ್ಯಾರ್ ಗ್ರಾಮ ಪಂಚಾಯತ್ ಹಾಕಿದೆ.
 ಆದರೂ ಈ ಕಸದ ರಾಶಿಯ ಮೇಲೆಯೇ. ಬೋರ್ಡ್ ನೇತಾಡುತ್ತಾ ಇರುವುದು ಕಂಡು ಬರುತ್ತಿದೆ. ಆದ್ದರಿಂದ ಕಸಕಡ್ಜಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಮಡುವಂತೆ ಪುದು ಮತ್ತು ಅಡ್ಯಾರ್ ಗ್ರಾಮ ಪಂಚಾಯತ್ ಪ್ರಯತ್ನಿಸಬೇಕಾಗಿದೆ ಎಂದು ಸಾರ್ವಜನಿಕರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News