×
Ad

ಅಲಿ ಸಾಹಸ: ಆಂಗ್ಲರಿಗೆ ಅಫ್ಘಾನಿಸ್ತಾನ ವಿರುದ್ಧ ರೋಚಕ ಜಯ

Update: 2016-03-23 17:07 IST

 ಹೊಸದಿಲ್ಲಿ, ಮಾ.23: ಇಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನ ಸೂಪರ್ -10 ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ 15 ರನ್‌ಗಳ ಜಯ ಗಳಿಸಿದೆ.
ದಿಲ್ಲಿ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 143 ರನ್ ಮಾಡಬೇಕಿದ್ದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 9ವಿಕೆಟ್ ನಷ್ಟದಲ್ಲಿ 127 ರನ್ ಮಾಡಲಷ್ಟೇ ಶಕ್ತವಾಯಿತು.
ಇಂಗ್ಲೆಂಡ್ 142/7: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿತ್ತು.
ಒಂದು ಹಂತದಲ್ಲಿ 6 ವಿಕೆಟ್ ನಷ್ಟದಲ್ಲಿ 59 ರನ್ ಗಳಿಸಿದ್ದ ಇಂಗ್ಲೆಂಡ್ ತಂಡವನ್ನು ಮೊಯೀನ್ ಅಲಿ ಮತ್ತು ಡೇವಿಡ್ ವಿಲ್ಲಿ ಆಧರಿಸಿದರು.
ಅಲಿ-ವಿಲ್ಲಿ ಎಂಟನೆ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ನೀಡಿದರು. ಅಲಿ ಔಟಾಗದೆ 41 ರನ್(33ಎ, 4ಬೌ, 1ಸಿ) ಮತ್ತು ವಿಲ್ಲಿ ಔಟಾಗದೆ 20 ರನ್(17ಎ,2ಸಿ) ಗಳಿಸಿದರು.
ನಾಯಕ ಇಯಾನ್ ಮೊರ್ಗನ್ ಅವರು ದೊಡ್ಡ ಮೊತ್ತದ ಸವಾಲನ್ನು ಸೇರಿಸುವ ಉದ್ದೇಶಕ್ಕಾಗಿ ಬ್ಯಾಟಿಂಗ್ ಆಯುಕೊಂಡಿದ್ದರು. ಆದರೆ ಅವರ ಪ್ರಯತ್ನ ಆರಂಭದಲ್ಲಿ ಫಲ ನೀಡಲಿಲ್ಲ.
ಇಂಗ್ಲೆಂಡ್ ಪವರ್‌ಪ್ಲೇಯ ಆರು ಓವರ್‌ಗಳಲ್ಲಿ 42 ರನ್ ಸೇರಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಅಫ್ಘಾನಿಸ್ತಾನದ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಅಗ್ರ ಸರದಿಯ ದಾಂಡಿಗರು ಎಡವಿದರು.
 2.6ನೆ ಓವರ್‌ನಲ್ಲಿ ಆಮಿರ್ ಹಂಝಾ ಎಸೆತವನ್ನು ಎದುರಿಸಲಾರದೆ ಜೇಸನ್ ರಾಯ್(5) ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಗಾಯಾಳು ಅಲೆಕ್ಸ್ ಹೇಲ್ಸ್ ಬದಲಿಗೆ ಸ್ಥಾನ ಪಡೆದಿದ್ದ ಜೇಮ್ಸ್ ವಿನ್ಸ್ ಅವರು ರಾಯ್ ಜೊತೆ ಇನಿಂಗ್ಸ್ ಆರಂಭಿಸಿದ್ದರು.
ವಿನ್ಸ್ ಅವರು ಪವರ್ ಪ್ಲೆ ಮುಗಿಯಲು ಮೂರು ಎಸೆತಗಳು ಬಾಕಿ ಇರುವಾಗ ಮುಹಮ್ಮದ್ ನಬಿಗೆ ರಿಟರ್ನ್ ಕ್ಯಾಚ್ ನೀಡಿ ವಿನ್ಸಿ( 22) ನಿರ್ಗಮಿಸಿದರು. ಆಗ ತಂಡದ ಸ್ಕೋರ್ 42 ಆಗಿತ್ತು. 5.4ನೆ ಓವರ್‌ನಲ್ಲಿ ನಾಯಕ ಇಯಾನ್ ಮೊರ್ಗನ್ (0) ಖಾತೆ ತೆರೆಯದೆ ನಬಿಗೆ ವಿಕೆಟ್ ಒಪ್ಪಿಸಿ ವಾಪಸಾದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಜೋ ರೂಟ್(12) ರನೌಟಾದರು.
  8.1ನೆ ಓವರ್‌ನಲ್ಲಿ ಜೋ ಬಟ್ಲರ್(6) ಅವರು ಶೆನ್ವಾರಿಗೆ ನಿರ್ಗಮಿಸಿದಾಗ ತಂಡದ ಸ್ಕೋರ್ 50. ಬೆನ್ ಸ್ಟೋಕ್ಸ್ (7) ಅವರು 17ರ ಹರೆಯದ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಎಸೆತವನ್ನು ಎದುರಿಸುವಲ್ಲಿ ಎಡವಿದರು. ಜೋರ್ಡನ್ ಅವರು ಮೊಯೀನ್ ಅಲಿ ಜೊತೆ ಹೋರಾಟಕ್ಕೆ ಸಾಥ್ ನೀಡಿದರು. ಆದರೆ ಜೋರ್ಡನ್ ತಂಡದ ಸ್ಕೋರ್ 85ಕ್ಕೆ ತಲುಪುವ ಕ್ರೀಸ್‌ನಲ್ಲಿ ಅಲಿಗೆ ಸಾಥ್ ನೀಡಿದರು. ಇವರ ಜೊತೆಯಾಟದಲ್ಲಿ 28 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು. ಜೋರ್ಡನ್ (15) ಅವರು ರಶೀದ್ ಖಾನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ಗೆ ನಿರ್ಗಮಿಸಿದರು.
ಮೊಯೀನ್ ಅಲಿ ಮತ್ತು ವಿಲ್ಲಿ ತಂಡವನ್ನು ಆಧರಿಸಿದರು.
ಅಫ್ಘಾನಿಸ್ತಾನದ ರಶೀದ್ ಖಾನ್ 17ಕ್ಕೆ 2, ಮುಹಮ್ಮದ್ ನಬಿ 17ಕ್ಕೆ 2 , ಆಮಿರ್ ಹಂಝ ಮತ್ತು ಶೆನ್ವಾರಿ ತಲಾ ಒಂದು ವಿಕೆಟ್ ಹಂಚಿಕೊಂಡರು.

ಸ್ಕೋರ್ ವಿವರ

ಇಂಗ್ಲೆಂಡ್: 20 ಓವರ್‌ಗಳಲ್ಲಿ 142/7

ರಾಯ್ ಬಿ ಆಮಿರ್ ಹಂಝ 5

ವಿನ್ಸ್ ಸಿ ಮತ್ತು ಬಿ ಮುಹಮ್ಮದ್ ನಬಿ 22

ರೂಟ್ ರನೌಟ್ 12

ಮೊರ್ಗನ್ ಬಿ ನಬಿ 0

ಸ್ಟೋಕ್ಸ್ ಬಿ ರಶೀದ್ ಖಾನ್ 7

ಬಟ್ಲರ್ ಸಿ ನಬಿ ಬಿ ಶೆನ್ವಾರಿ 6

ಮೊಯಿನ್ ಅಲಿ ಔಟಾಗದೆ 41

 ಜೋರ್ಡನ್ ಸಿ ಮತ್ತು ಬಿ ರಶೀದ್ ಖಾನ್ 15

ವಿಲ್ಲಿ ಔಟಾಗದೆ 20

ಇತರ 14

ವಿಕೆಟ್ ಪತನ: 1-16, 2-42, 3-42, 4-42 5-50, 6-57, 7-85.

ಬೌಲಿಂಗ್ ವಿವರ:

ಆಮಿರ್ ಹಂಝ 4-0-45-1

ಶಾಪೂರ್ ಝದ್ರಾನ್ 4-0-34-0

ಮುಹಮ್ಮದ್ ನಬಿ 4-0-17-2

ಸಮೀವುಲ್ಲಾ ಶೆನ್ವಾರಿ 4-0-23-1

ರಶೀದ್ ಖಾನ್ 4-0-17-2

ಅಫ್ಘಾನಿಸ್ತಾನ: 20 ಓವರ್‌ಗಳಲ್ಲಿ 127/9

ಮುಹಮ್ಮದ್ ಶಹಝಾದ್ ಎಲ್‌ಬಿಡಬ್ಲು ವಿಲ್ಲಿ 4

ನೂರ್ ಅಲಿ ಝದ್ರಾನ್ ಸಿ ಮತ್ತು ಬಿ ರಶೀದ್ 17

 ಅಸ್ಘರ್ ಸ್ಟಾನಿಕ್‌ಝೈ ಸಿ ರೂಟ್ ಬಿ ಜೋರ್ಡನ್ 1

ಗುಲ್ಬದಿನ್ ನೈಬ್ ಸಿ ಸ್ಟೋಕ್ಸ್ ಬಿ ವಿಲ್ಲಿ 0

ರಶೀದ್ ಖಾನ್ ಸಿ ಮೊರ್ಗನ್ ಬಿ ಅಲಿ 15

ಮುಹಮ್ಮದ್ ನಬಿ ಸಿ ಜೋರ್ಡನ್ ಬಿ ರಶೀದ್ 12

ಸಮೀವುಲ್ಲಾ ಶನ್ವಾರಿ ಸಿ ರೂಟ್ ಬಿ ಸ್ಟೋಕ್ಸ್ 22

ನಜೀಬುಲ್ಲಾ ಝದ್ರಾನ್ ರನೌಟ್ 14

 ಶಫಿಕುಲ್ಲಾ ಔಟಾಗದೆ 35

ಆಮಿರ್ ಹಂಝ ರನೌಟ್ 1

ಶಾಪೂರ್ ಝದ್ರಾನ್ ಔಟಾಗದೆ 0, ಇತರ 6

ವಿಕೆಟ್ ಪತನ: 1-4, 2-12, 3-13, 4-35, 5-39, 6-64, 7-85, 8-94, 9-108.

ಬೌಲಿಂಗ್ ವಿವರ: ವಿಲ್ಲಿ 4-0-23-2

ಜೋರ್ಡನ್ 4-0-27-1

ಪ್ಲುಂಕೆಟ್ 4-1-12-0

ಮೊಯಿನ್ ಅಲಿ 2-0-17-1

ರಶೀದ್ 3-0-18-2

ಸ್ಟೋಕ್ಸ್ 3-0-28-1.

ಪಂದ್ಯಶ್ರೇಷ್ಠ: ಮೊಯಿನ್ ಅಲಿ(ಇಂಗ್ಲೆಂಡ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News