×
Ad

ಬೆಳ್ತಂಗಡಿ: ಕ್ಯಾನ್ಸರ್ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಮಾಹಿತಿ ನೀಡುವ ಉಚಿತ ಶಿಬಿರ

Update: 2016-03-23 17:51 IST

ಬೆಳ್ತಂಗಡಿ: ಕ್ಯಾನ್ಸರ್ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಮಾಹಿತಿ ನೀಡುವ ಉಚಿತ ಶಿಬಿರ ಮಾ. 27 ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಬೆಳಿಗ್ಗೆ 9 ರಿಂದ 1-30 ರವರೆಗೆ ನಡೆಯಲಿದೆ ಎಂದು ಸೇವಾಭಾರತಿ ಕನ್ಯಾಡಿ ಇದರ ಮಾಜಿ ಅಧ್ಯಕ್ಷ ಹರೀಶ್ ರಾವ್ ತಿಳಿಸಿದರು.

        ಅವರು ಬುಧವಾರ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಿಬಿರದ ಮಾಹಿತಿ ನೀಡಿದರು. ಸೇವಾಭಾರತಿ ಕನ್ಯಾಡಿ ಹಾಗೂ ಯು. ವಿಜಯರಾಘವ ಪಡ್ವೆಟ್ನಾಯ ಸಪ್ತತಿ ಅಭಿನಂದನಾ ಸಮಿತಿ ಸಂಯೋಜನೆಯಲ್ಲಿ ನಡೆಯುವ ಈ ಶಿಬಿರದಲ್ಲಿ ನುರಿತ ತಜ್ಞ-ವೈದ್ಯರುಗಳು ಬೆಂಗಳೂರಿನಿಂದ ಆಗಮಿಸಿ ಉಚಿತ ತಪಾಸಣೆ ಮತ್ತು ಸೂಕ್ಷ್ಮ ವೈದ್ಯಕೀಯ ಸಲಹೆ ಕೊಡುವರಿದ್ದಾರೆ. ಸ್ತನ, ಗರ್ಭಕೋಶ, ಬಾಯಿ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ತಪಾಸಣೆ ಮಾಡಲಾಗುವುದು. ಸಾರ್ವಜನಿಕರು ಯಾವುದೇ ಸಂಕೋಚ, ಹೆದರಿಕೆ ಇಲ್ಲದೆ ಶಿಬಿರದಲ್ಲಿ ಭಾಗವಹಿಸಿದಲ್ಲಿ ಪ್ರಾರಂಭದಲ್ಲೇ ಕ್ಯಾನ್ಸರ್ ಇದ್ದರೆ ಅದನ್ನು ಪತ್ತೆ ಹಚ್ಚಿ ಗುಣಪಡಿಸಿಕೊಳ್ಳಬಹದು. ಅಲ್ಲದೆ ಈ ಸಂದರ್ಭ ಕ್ಯಾನ್ಸರ್ ಪೀಡಿತರ ಶ್ರೇಯೋಭಿವೃದ್ದಿಗಾಗಿ ಕ್ಯಾನ್ಸರ್ ಸಹಾಯತಾ ನಿಧಿಯ ಸ್ಥಾಪನೆ ಮಾಡಲಾಗುವುದು ಎಂದರು.

 ಶಿಬಿರವನ್ನು ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹರೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳ್ತೆ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಕ್ಯಾನ್ಸರ್ ಸಹಾಯತಾ ನಿಧಿಗೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸೇವಾ ಭಾರತಿ ಅಧ್ಯಕ್ಷ ಬಿ. ಕೃಷ್ಣಪ್ಪ ಗುಡಿಗಾರ್ ವಹಿಸಲಿದ್ದಾರೆ. ಶಿಬಿರಕ್ಕೆ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಬೆಂಗಳೂರು, ಬೆಳ್ತಂಗಡಿ ತಾಲೂಕು ರೋಟರಿ ಕ್ಲಬ್ ತುಳು ಶಿವಳ್ಳಿ ಸಭಾ, ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಮಹಾಸಭಾ, ಲಯನ್ಸ್‌ಕ್ಲಬ್, ಔಷಧ ವ್ಯಾಪಾರಿಗಳು, ಶ್ರೀಶಾರದಾ ಸೇವಾ ಟ್ರಸ್ಟ್ ಸಹಕರಿಸಲಿವೆ ಎಂದರು.

 ಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ಭಟ್, ಶಿವಳ್ಳಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಲಯನ್ಸ್‌ಕ್ಲಬ್ ಅಧ್ಯಕ್ಷ ರಾಜು ಶೆಟ್ಟಿ, ಯು. ವಿಜಯರಾಘವ ಪಡ್ವಟ್ನಾಯರವರ ಸಪ್ತತಿ ಅಭಿನಂದನ ಸಮಿತಿ ಕಾರ್ಯದರ್ಶಿ ಜಗದೀಶ್ ಇದ್ದರು.

ಕ್ಯಾನ್ಸರ್ ತಪಾಸಣೆಗೆ ಬೆಂಗಳೂರಿನಿಂದ ತಪಾಸಣೆಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳನ್ನು ಹೊಂದಿರುವ ಸರ್ವ ಸುಸಜ್ಜಿತ ಬಸ್ ಉಜಿರೆಗೆ ಬರಲಿದೆ. ಕರ್ನಾಟಕ ಕ್ಯಾನ್ಸರ್ ಸೊಸೈಟಿ ಸಂಸ್ಥಾಪಕ ಡಾ.ಸಿಕೆ.ಎ.ಎನ್ ಶಾಸ್ತ್ರಿ, ಅಧ್ಯಕ್ಷೆ ಡಾ ವಿಜಯಲಕ್ಷ್ಮಿ ದೇಶ್‌ಮುಖ್, ಉಪಾಧ್ಯಕ್ಷರಾದ ಡಾಎಂ.ಆರ್.ಕುಲಕರ್ಣಿ, ಹೆಚ್.ವಿ.ಸುರೇಶ್, ಖಜಾಂಚಿ ಎಂ.ಎನ್. ಗುಂಡೂರಾವ್ ಇವರುಗಳು ಆಗಮಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News