ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ 189 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Update: 2016-03-23 13:42 GMT

ಮೂಡುಬಿದಿರೆ: ತೋಡಾರಿನ ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ಇ ಎಂಡ್ ಸಿ,ಸಿಎಸ್, ಐಎಸ್, ಇಇ, ಎಂಇ ವಿಭಾಗಗಳ ಒಟ್ಟು 189 ವಿದ್ಯಾರ್ಥಿಗಳಿಗೆ ಕಾಸರಗೋಡು ಕೇಂದ್ರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಿ.ಗೋಪ ಕುಮಾರ್ ಅವು ಪದವಿ ಪ್ರದಾನ ಮಾಡಲಾಯಿತು.

 ನಂತರ ಮಾತನಾಡಿದ ಅವರು ಶ್ರೇಷ್ಠ ಆಧ್ಮಾತ್ಮಿಕ ಚಿಂತನೆಯನ್ನು ಹೊಂದಿರುವ ದೇಶ, ಶಿಕ್ಷಣ ಕ್ರಾಂತಿಯಿಂದಾಗಿ ಸಾತ್ವಿಕವಾಗಿ ಬೆಳೆಯುತ್ತದೆ. ಚಾರಿತ್ರಿಕ, ಸಾಂಸ್ಕೃತಿಕ ಮೌಲ್ಯಗಳು, ತನ್ನದೇ ವಿಶಿಷ್ಟ ಪರಂಪರೆಯನ್ನು ಹೊಂದಿರುವ ದೇಶ ಭಾರತ. ಪ್ರಾಚೀನ ಕಾಲದಿಂದಲೇ ಶಿಕ್ಷಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಭಾರತೀಯ ಶಿಕ್ಷಣ ಪದ್ಧತಿ ಮಾನವೀಯತೆಯನ್ನು ಪ್ರತಿನಿಧಿಸುವಂತದ್ದು. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಪ್ರತಿಭೆ, ಸಾಮರ್ಥ್ಯದೊಂದಿಗೆ ಸಾಧನೆ ಮಾಡಿದರೆ ಜಗತ್ತಿನಲ್ಲೇ ಭಾರತ ಅಗ್ರಗಣ್ಯವಾಗುತ್ತದೆ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂಜಿನಿಯರಿಂಗ್ ಕಾಲೇಜುಗಳಿಂದ ವರ್ಷಕ್ಕೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಉದ್ಯೋಗದತ್ತ ಮುಖ ಮಾಡುತ್ತಾರೆ. ಆದರೆ ಅದರಲ್ಲಿ ಶೇ.25 ಮಾತ್ರ ಅರ್ಹ ಇಂಜಿನಿಯರ್‌ಗಳಾಗುತ್ತಾರೆ. ಜಾಗತಿಕ ಮಟ್ಟದಲ್ಲಿರುವ ಸ್ಪರ್ಧೆಯನ್ನು ಗಮನಿಸಿ, ಅಧ್ಯಯನದಲ್ಲಿ ಬದ್ಧತೆಯೊಂದಿಗೆ ಮುನ್ನಡೆದರೆ ಶಿಕ್ಷಣ, ಉದ್ಯೋಗರಂಗ ಮಾತ್ರವಲ್ಲ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಯೆನೆಪೋಯ ವಿ.ವಿ.ಯ ಉಪಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸದ್ವಿಚಾರಗಳು ವಿದ್ಯಾರ್ಥಿಗಳಿಗೆ ಪಕ್ವತೆಯನ್ನು ನೀಡುತ್ತದೆ. ಪಾರದರ್ಶಕತೆ ಆಡಳಿತ ವ್ಯವಸ್ಥೆ, ಗುಣಮಟ್ಟದ ಶಿಕ್ಷಣಕ್ಕೆ ಯೆನೆಪೋಯ ಸಂಸ್ಥೆ ಅಧ್ಯತೆ ನೀಡುತ್ತಿದೆ ಎಂದರು.
ದೇರಳಕಟ್ಟೆಯಲ್ಲಿರುವ ಐಎಇ ಅಧ್ಯಕ್ಷ ಮಹಮ್ಮದ್ ಕುಂಞಿ, ಐಎಇ ಟ್ರಸ್ಟಿಗಳಾದ ಡಾ.ಸಿ.ಪಿ ಹಬೀಬ್ ರೆಹಮಾನ್, ಅಬ್ದುಲ್ ಜಾವೇದ್, ಯೆನೆಪೋಯ ಅಬ್ದುಲ್ಲಾ ಜಾವೀದ್, ಅಕ್ತಾರ್ ಹುಸೈನ್, ಯೆನೆಪೋಯ ವಿ.ವಿ ನಿರ್ದೇಶಕ ಡಾ.ಶ್ರೀಕುಮಾರ್ ಮೆನನ್, ಪ್ರಾಂಶುಪಾಲ ಸಂದಿೀಪ್ ಜೆ.ನಾಯಕ್ ಉಪಸ್ಥಿತರಿದ್ದರು.
ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಬಸವರಾಜಪ್ಪ ವೈ.ಎಚ್, ಗಂಗಾಧರ, ಗುರುಪ್ರಸಾದ್, ಪಾಡು ನಾಕ್, ಪ್ರಸನ್ನ ಕುಮಾರ್ ಪದವಿ ಪಡೆದ ವಿದ್ಯಾರ್ಥಿಗಳ ವಿವರ ನೀಡಿದರು. ಮಮತಾ, ನಝೀಯಾ ಅಬ್ದುಲ್ ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಎನ್ ಉಪಧ್ಯಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News