×
Ad

ಉಳ್ಳಾಲ. ಮಾ, 23: ಮುನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷ

Update: 2016-03-23 20:33 IST

ಉಳ್ಳಾಲ. ಮಾ, 23: ಮುನ್ನೂರು ಗ್ರಾ.ಪಂ ವ್ಯಾಪ್ತಿಯ ಕುತ್ತಾರುಗುತ್ತು ಎಂಬಲ್ಲಿ ಬುಧವಾರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಭಯಾತಂಕದ ವಾತಾವರಣ ಸೃಷ್ಟಿಯಾಗಿದೆ.ತೆ ಒಂದು ಬಾರಿ ಮಾತ್ರ ಕಾಣಿಸಿಕೊಂಡು ನಂತರ ಎಲ್ಲಿ ಅವಿತುಕೊಂಡಿದೆ ಎಂದು ಯಾರಿಗೂ ತಿಳಿದಿಲ್ಲ. ಇದೀಗ ಸ್ಥಳೀಯರು ಚಿರತೆಯ ಭೀತಿಯಲ್ಲಿ ತಮ್ಮ ದೈನಂದಿನ ಕೆಲಸಗಳಿಗೆ ತೆರಳಲೂ ಭಯಪಡುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಚಿರತೆಯ ಭೀತಿಯನ್ನು ನಿವಾರಿಸಬೇಕೆಂದು ಸಾರ್ವಜನಿಕರು ಅಳವತ್ತುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News