ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬುಲ್ ಬುಲ್ ವಿಭಾಗಕ್ಕೆ ರಾಷ್ಟ್ರಮಟ್ಟದ ಗೋಲ್ಟನ್ ಆರೋ ಪ್ರಶಸ್ತಿ
Update: 2016-03-23 20:38 IST
ಪುತ್ತೂರು: ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಂಹಿತಾ ಶರ್ಮ ಬಿ. ಎಸ್. ರವರಿಗೆ ಬಾರತ್ ಸ್ಕೌಟ್ಸ್ ಮತ್ತು ಗೈಟ್ಸ್‌ನ ರಾಷ್ಟ್ರೀಯ ಮಟ್ಟದ ಗೋಲ್ಟನ್ ಆರೋಪ್ರಶಸ್ತಿ ಲಭಿಸಿದೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬುಲ್‌ಬುಲ್ ಶಿಕ್ಷಕಿ ಶ್ರೀಮತಿ ಸೌಮ್ಯ ಹಾಗೂ ಗೈಡ್ ಕ್ಯಾಪ್ಟನ್ ಶ್ರೀಮತಿ ಸುನೀತಾರವರು ಈಕೆಯನ್ನು ತರಬೇತುಗೊಳಿಸಿರುತ್ತಾರೆ. ಈಕೆ ಶರ್ಮ ಪ್ರಿಂಟಿಂಗ್‌ವರ್ಕ್ಸ್‌ನ ರಾಜೇಶ ಶರ್ಮ ಹಾಗೂ ಶ್ರೀಮತಿ ಸೀಮಾ ದಂಪತಿಗಳ ಪುತ್ರಿ.