×
Ad

‘ರೋಹಿತ್ ಕಾಯ್ದೆ’ ಜಾರಿವರೆಗೂ ಹೋರಾಟ: ಕನ್ಹಯ್ಯ

Update: 2016-03-23 21:55 IST

ಹೈದರಾಬಾದ್,ಮಾ.23: ಹೈದರಾಬಾದ್ ವಿವಿಯ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲರ ಆತ್ಮಹತ್ಯೆ ಮತ್ತು ನಂತರದ ಬೆಳವಣಿಗೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರಕಾರವು ಜೆಎನ್‌ಯು ವಿವಾದಕ್ಕೆ ಕಿಚ್ಚು ಹಚ್ಚಿತ್ತು ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಅವರು ಬುಧವಾರ ಇಲ್ಲಿ ಆರೋಪಿಸಿದರು.
 ಮಧ್ಯಾಹ್ನ ಇಲ್ಲಿ ವಿಮಾನದಲ್ಲಿ ಬಂದಿಳಿದ ನಂತರದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಸರಕಾರವು ದೌರ್ಜನ್ಯಗಳನ್ನು ತಡೆಯಲು ನಿರ್ಭಯಾ ಕಾಯ್ದೆಯ ಮಾದರಿಯಲ್ಲಿ ‘ರೋಹಿತ್ ಕಾಯ್ದೆ’ಯನ್ನು ತರುವವರೆಗೆ ಹೋರಾಟವು ಮುಂದುವರಿಯಲಿದೆ ಎಂದು ಹೇಳಿದರು.

ವೇಮುಲ ವಿವಾದವನ್ನು ಚಾಪೆಯಡಿ ತೂರಲು ಸರಕಾರವು ತುಂಬ ಬುದ್ಧಿವಂತಿಕೆಯಿಂದ ಜೆಎನ್‌ಯು ವಿವಾದವನ್ನು ದೊಡ್ಡದಾಗಿಸಿತು. ಆದರೆ ವಿಭಿನ್ನ ಧೋರಣೆಗಳನ್ನು ಹೊಂದಿದ್ದರೂ ರಾಷ್ಟ್ರದಲ್ಲಿ ನ್ಯಾಯದ ರಕ್ಷಣೆಯ ವಿಷಯ ಬಂದಾಗ ನಾವೆಲ್ಲ ಒಂದೇ ಎನ್ನುವುದು ನಮಗೆಲ್ಲ ಗೊತ್ತು. ಹೀಗಾಗಿಯೇ ಜೈಲಿನಿಂದ ಹೊರಗೆ ಬಂದ ತಕ್ಷಣವೇ ಜೆಎನ್‌ಯು ವಿದ್ಯಾರ್ಥಿ ಸಂಘದ ಪರವಾಗಿ ನಾನೇ ಹೈದರಾಬಾದ್‌ಗೆ ಹೋಗಲು ನಿರ್ಧರಿಸಿದ್ದೆ. ದಿಲ್ಲಿಯಿಂದ ಹೊರಗೆ ನನ್ನ ಮೊದಲ ಭೇಟಿ ಹೈದರಾಬಾದ್‌ಗೆ ಎಂದು ನಿರ್ಣಯಿಸಿದ್ದೆ ಎಂದರು.

 ಪ್ರಸಕ್ತ ಸನ್ನಿವೇಶದಲ್ಲಿ ವೇಮುಲಾರ ತಾಯಿ ಭಗತ್ ಸಿಂಗ್‌ರ ತಾಯಿಯಿದ್ದಂತೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News