ಶಿವಮೊಗ್ಗ: ನಾಲ್ಕು ಜನರ ತಂಡದಿಂದ ಹೊಲದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಗೆ ಕೊಡಲಿ ಏಟು: ವ್ಯಕ್ತಿ ಸ್ಥಿತಿ ಚಿಂತಾಜನಕ
ಮುಂಡಗೋಡ : ಯಾವದೇ ಸೇಡು ಇಟ್ಟುಕೊಂಡು ಬಂದು ಹೊಲದಲ್ಲಿ ಕೆಲ ಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ನಾಲ್ಕು ಜನರೊಳಗೊಂಡ ತಂಡವು ಕೊಡಲಿಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ಸಂಭವಿಸಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಹುನಗುಂದ ಗ್ರಾಮದ ರಹವಾಸಿ ರುಸ್ತುಂಸಾಬ ಬಾಷಾಸಾಬ ಬುಡ್ಡಣ್ಣವರ ಎಂದು ತಿಳಿದು ಬಂದಿದೆ. ಈತ ಅಗಡಿ ಗ್ರಾಮದ ತನ್ನ ಹೊಲದಲ್ಲಿ ಕೆಲಸಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಹಲ್ಲೆನಡೆಸಿದ ವ್ಯಕ್ತಿಗಳನ್ನು ಅಗಡಿ ಗ್ರಾಮದ ಮದಾರಸಾಬ, ಪತ್ತೇಸಾಬ ತೆರಗಣ್ಣವರ, ಮೌಲಾಲಿ, ಹಜರತ ಅಲಿ ಎಂದು ಹೇಳಲಾಗಿದೆ.
ಕೊಡಲಿ ಏಟಿನಿಂದ ಮಾರಾಂತಿಕವಾಗಿ ಗಾಯಗೊಂಡ ಬಾಷಾಸಾಬ ರಕ್ತಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದವನನ್ನು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿದೆ. ಗಾಯಗೊಂಡವನನ್ನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಮುಂಡಗೋಡ ಪೊಲೀಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ