ಕೇಂದ್ರ ನೌಕರರ ತುಟ್ಟಿಭತ್ತೆ ಶೇ.6 ಏರಿಕೆ

Update: 2016-03-23 18:22 GMT

ಹೊಸದಿಲ್ಲಿ, ಮಾ.23: ಸರಕಾರವು ತನ್ನ ನೌಕರರ ತುಟ್ಟಿಭತ್ತೆಯನ್ನು ಶೇ.6ರಷ್ಟು ಹೆಚ್ಚಿಸುವ ಮೂಲಕ ಭರ್ಜರಿ ಹೋಳಿ ಕೊಡುಗೆಯನ್ನು ನೀಡಿದೆ. ಒಂದು ಕೋಟಿಗೂ ಅಧಿಕ ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ.

ಸರಕಾರದ ಬೊಕ್ಕಸಕ್ಕೆ ವಾರ್ಷಿಕ 14,724.74 ಕೋಟಿ ರೂ. ಹೆಚ್ಚುವರಿ ಹೊರೆಯನ್ನುಂಟು ಮಾಡಲಿರುವ ಈ ಏರಿಕೆ 2016,ಜ.1ರಿಂದ ಅನ್ವಯಗೊಳ್ಳಲಿದೆ ಎಂದು ಕೇಂದ್ರ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರು ತಿಳಿಸಿದರು.

50 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 58 ಲಕ್ಷ ಪಿಂಚಣಿದಾರರು ತುಟ್ಟಿಭತ್ತೆ ಏರಿಕೆಯ ಲಾಭವನ್ನು ಪಡೆಯಲಿದ್ದು, ಅದು ಹಾಲಿ ಶೇ.119ರಿಂದ ಶೇ.125ಕ್ಕೆ ಹೆಚ್ಚಲಿದೆ. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ತುಟ್ಟಿಭತ್ತೆಯನ್ನು 2015 ಜುಲೈ 1ರಿಂದ ಜಾರಿಗೊಳ್ಳುವಂತೆ ಶೇ.113ರಿಂದ ಶೇ.119ಕ್ಕೆ ಹೆಚ್ಚಿಸಲಾಗಿತ್ತು.

ಕಾಂಗ್ರೆಸ್ ಶಾಸಕರು ಮಾರ್ಚ್ 18ರಂದು ಹರೀಶ್‌ರಾವತ್ ವಿರುದ್ಧ ಬಂಡಾಯವೇಳುವುದಕ್ಕೆ ಬಹಳ ಸಮಯ ಮೊದಲೇ ರಾಮದೇವ್ ಜೊತೆ ಸಂಪರ್ಕದಲ್ಲಿದ್ದಾರೆಂಬುದ್ನು ತೋರಿಸಲು ತಮ್ಮ ಬಳಿ ಸಾಕಷ್ಟು ಪುರಾವೆಗಳಿವೆಯೆಂದು ಉತ್ತರಾಖಂಡ್ ಕಾಂಗ್ರೆಸ್ ಅಧ್ಯಕ್ಷರು ಆಪಾದಿಸಿದ್ದಾರೆ.

ರಾಮ್‌ದೇವ್ ಬಿಜೆಪಿ ಏಜೆಂಟರ ಹಾಗೆ ಕೆಲಸ ಮಾಡುತ್ತಿದು, ಇತರ ಸಾಧುಗಳೊಂದಿಗೆ ಸೇರಿಕೊಂಡು ಕಾಂಗ್ರೆಸ್‌ಸರಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆಂದು ಅವರು ದೂರಿದ್ದಾರೆ. ರಾಮದೇವ್ ಮಾತ್ರವಲ್ಲ, ಮಾಧ್ಯಮರಂಗದ ಕೆಲವು ವ್ಯಕ್ತಿಗಳು ಕೂಡಾ ರಾಜ್ಯ ಸರಕಾರವನ್ನು ಪತನಗೊಳಿಸುವ ಸಂಚಿನಲ್ಲಿ ಶಾಮೀಲಾಗಿದ್ದಾರೆ. ಅವರ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದೆಂದು ಉಪಾಧ್ಯಾಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News