ಪೋಪ್ ಫ್ರಾನ್ಸಿಸ್ ಬಳಸಿದ ಕಾರು ನಿಮಗೆ ಬೇಕೇ?
Update: 2016-03-24 14:26 IST
ಪೋಪ್ ಬಳಸಿದ ಕಾರಿಗೆ ನೀವು ಮಾಲೀಕರಾಗಬಹುದು. ಅದು ಹೇಗೆ? ಹರಾಜಿನಲ್ಲಿ ಪಡೆಯುವ ಮೂಲಕ. ಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕ ಭೇಟಿಗೆ ಪೋಪ್ ಫ್ರಾನ್ಸಿಸ್ ಬಳಸಿದ ಕಾರು ಇದೀಗ ಹರಾಜಿಗಿದೆ.
ಚಾರಿಟಿಬರ್ ಹಾಗೂ ಆರ್ಚ್‌ಡಯೋಸಿಸ್ ಆಫ್ ನ್ಯೂಯಾರ್ಕ್, 2015ರ ಮಾಡೆಲ್‌ನ ಫಿಯೆಟ್ 500 ಲಾಂಗ್ ಹ್ಯಾಚ್‌ಬೇಕ್ಸ್ ಹರಾಜಿಗೆ ಮುಂದಾಗಿವೆ.
ಇದರಿಂದ ಬಂದ ಹಣವನ್ನು ಕ್ಯಾಥೊಲಿಕ್ ಶಾಲೆ, ದತ್ತಿ ಕಾರ್ಯ ಹಾಗೂ ಪರಿಹಾರ ಕಾರ್ಯಕ್ಕೆ ಬಳಸಲಾಗುತ್ತದೆ.
ಮಾರ್ಚ್ 31ರ ಮಧ್ಯಾಹ್ನ 3ರವರೆಗೆ ಆನ್‌ಲೈನ್ ಹರಾಜು ಮುಕ್ತವಾಗಿದ್ದು, ಚಾರಿಟಿಬರ್ ಮೂಲಕ ಬಿಡ್ ಸಲ್ಲಿಸಬಹುದು.
10,500 ಡಾಲರ್‌ನಿಂದ ಆರಂಭವಾದ ಬಿಡ್ಡಿಂಗ್ ಇದೀಗ 46 ಸಾವಿರ ಡಾಲರ್‌ಗೆ ತಲುಪಿದೆ. ಸುಮಾರು 82 ಸಾವಿರ ಡಾಲರ್ ಆದಾಯ ಹರಾಜಿನಿಂದ ನಿರೀಕ್ಷಿಸಲಾಗಿದೆ. ಕಂಪನಿ ವೆಬ್‌ಸೈಟಿನ ಪ್ರಕಾರ, ಇದರ ಬೆಲೆ 18,700 ಡಾಲರ್.