ಬಂಟ್ವಾಳ: ಪಿಡಿಒ ಅನುದಾನ, ಕಾಮಗಾರಿಯ ವಿವರ ನೀಡುತ್ತಿಲ್ಲ; ಆರೋಪ
ಮಂಗಳೂರು: ಬಂಟ್ವಾಳ ತಾಲೂಕು ಮೂಡುಪಡುಕೋಡಿ ಗ್ರಾಮದ ಪಂಜೋಡಿಯಲ್ಲಿರುವ ಅಂಬೇಡ್ಕರ್ ಭವನದ ಶೌಚಾಲಯ ಮತ್ತು ಆವರಣ ಗೋಡೆಗೆ ಬಿಡುಗಡೆ ಮಾಡಿದ ಅನುದಾನ ಮತ್ತು ನಡೆದ ಕಾಮಗಾರಿ ವಿವರವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ನೀಡುತ್ತಿಲ್ಲ ಎಂದು ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಷ್ಠಾನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆ.ಎ. ಸಾಲು ಆರೋಪಿಸಿದ್ದಾರೆ.
ಭವನದ ಶೌಚಾಲಯ ಮತ್ತು ಆವರಣ ಗೋಡೆ ರಚನೆಗೆ ಬಿಡುಗಡೆ ಮಾಡಿದ ಅನುದಾನ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪಿಡಿಒ ಹೇಳುತ್ತಿದ್ದಾರೆ.
ಕಾಮಗಾರಿಗೆ 2ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಈ ಪೈಕಿ 1.50 ಲಕ್ಷ ರೂ. ಅನುದಾನವನ್ನು ಹಿಂದಿನ ಕಾಮಗಾರಿ ವೆಚ್ಚಕ್ಕೆ ಬಳಸಿಕೊಳ್ಳಲಾಗಿದೆ. ಉಳಿದ 50 ಸಾವಿರ ರೂ. ಕಾಮಗಾರಿಯನ್ನು ಶೀಘ್ರ ನಡೆಸಲಾಗುವುದು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗುವುದು ಎಂದರು.
ಅರ್ಜಿದಾರ ಪ್ರಶಾಂತ್ ಜೈನ್, ಬಿ. ಸುಂದರ, ಸುಧೀಂದ್ರ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.