ಬಾಚಣಿಕೆ ಜಲಾಶಯಲ್ಲಿ ಜಲಸಮಾಧಿಯಾದ ಕುಂದಗೋಳ ಯುವಕ ಸಾವು
ಮುಂಡಗೋಡ : ಕುಂದಗೋಳ ಯುವಕ ಮುಂಡಗೋಡ ಬಾಚಣಿಕೆ ಜಲಾಶಯದಲ್ಲಿ ಜಲ ಸಮಾಧಿಯಾದ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಜಲಸಮಾಧಿಯಾದವನನ್ನು ಕುಂದಗೋಳ ತಾಲೂಕಿನ ಹರಭಟ್ಟ ಶಾಲೆಯ ಹತ್ತಿರದ ನಿವಾಸಿ ಮಂಜುನಾಥ ಹನಮಂತಪ್ಪ ಕುಂದಗೋಳ(22)ಎಂದು ಹೇಳಲಾಗಿದೆ.
ಬುಧವಾರ ಕುಂದಗೋಳನಲ್ಲಿ ಹೋಳಿ ಹುಣ್ಣಿಮೆಯ ಓಕಳಿ ಇರುವುದರಿಂದ ಬಣ್ಣಾಟದಿಂದ ದೂರವಿರಲು ನಾಲ್ಕುಜನ ಗೆಳಯರ ತಂಡ ಮುಂಡಗೋಡಿನ ಬಾಚಣಿಕೆ ಜಲಾಶಯಕ್ಕೆ ಭೇಟಿ ಕೊಟ್ಟಿದ್ದರು ಎನ್ನಲಾಗಿದೆ.
ಸಂಜೆ ಎಲ್ಲ ಗೆಳೆಯರು ಹಿಂದರುಗುವ ವೇಳೆ ಮತ್ತೊಂದು ಸಲ ಜಲಾಶಯದಲ್ಲಿ ಸ್ನಾನ ಮಾಡಲು ಮೃತ ಮಂಜುನಾಥ ಇಳಿದಾಗ ಜಲಶಾಯದಲ್ಲಿ ಮುಳಗಿದ ಎನ್ನಲಾಗಿದೆ.
ಮೃತ ಶರೀರ ಹೊರಗಡೆ ತೆಗೆಯಲು ಅಗ್ನಿಶಾಮಕ ದಳ ಮತ್ತು ಸ್ಥಳಿಯ ಮೀನುಗಾರರು ಪ್ರಯತ್ನ ಪಟ್ಟು ಶರೀರವನ್ನು ಸುಮಾರು 11.30 ಕ್ಕೆ ಹೊರಗಡೆ ತೆಗೆದಿದ್ದಾರೆ.
ಮೃತನ ತಂದೆ ಕುಂದಗೋಳ ಪಟ್ಟಣಪಂಚಾಯತಿಯಲ್ಲಿ ಗುಮಾಸ್ತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪಿಆಯ್ ಎಸ್.ಸಿ.ಪಾಟೀಲ ಪಿಎಸ್‌ಆಯ್ ಲಕ್ಕಪ್ಪ ನಾಯಕ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.