ಉಳ್ಳಾಲ,ಮಾ.24: ಸಾತ್ವಿಕ ಭಕ್ತಿಯಿಂದ ದೈವ, ದೇವರುಗಳ ಆರಾಧನೆ ನಡೆಯಬೇಕು,ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ

Update: 2016-03-24 14:46 GMT

 ಉಳ್ಳಾಲ,ಮಾ.24: ಸಾತ್ವಿಕ ಭಕ್ತಿಯಿಂದ ದೈವ, ದೇವರುಗಳ ಆರಾಧನೆ ನಡೆಯಬೇಕು. ದೇವರ ಸನ್ನಿಧಾನದಲ್ಲಿಆಡಂಬರದ ಭಕ್ತಿ ಮತ್ತು ಅಹಂ ಎಂಬ ಭಾವನೆಗಳು ಕಡಿಮೆಯಾಗಬೇಕುಎಂದು ಕೇರಳ ವರ್ಕಳ ಶಿವಗಿರಿಯ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿಅಭಿಪ್ರಾಯಪಟ್ಟರು.
ಅವರು ಶ್ರೀ ಮಲರಾಯಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನಿಂದಕಿನ್ಯ ಬೆಳರಿಂಗೆಯ ಶ್ರೀ ಮಲರಾಯಧೂಮಾವತಿ ಬಂಟ ದೈವಗಳ ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕಲಶ, ಧರ್ಮನೇಮದ ಅಂಗವಾಗಿ ಏರ್ಪಡಿಸಲಾಗಿದ್ದಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಹಿಂದೆ ದೈವಸ್ಥಾನಗಳಲ್ಲಿ ದೈವಾರಾಧನೆಯಲ್ಲಿಆಡಂಬರವಿರಲಿಲ್ಲ. ಆದರೆಆಧುನಿಕಜೀವನದಲ್ಲಿ ಸಿನಿಮೀಯ ಹಾಡುಗಳು ಕಂಡು ಬರುತ್ತಿದ್ದು, ಇದರಿಂದಧಾರ್ಮಿಕ ಮೌಲ್ಯಕ್ಕೆಅಡ್ಡಿಯುಂಟಾಗುತ್ತಿದೆಎಂದರು.
ಶ್ರೀ ಉಮಾಮಹೇಶ್ವರೀದೇವಸ್ಥಾನಕಾಪಿಕಾಡುತೊಕ್ಕೊಟ್ಟುಇಲ್ಲಿನ ಆಡಳಿತ ಮೊಕ್ತೇಸರಈಶ್ವರ್ ಉಳ್ಳಾಲ್ ಧಾರ್ಮಿಕಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  
   ಕಾರ್ಯಕ್ರಮದಅದ್ಯಕ್ಷತೆಯನ್ನು ಮೇಗಿನ ಪಂಜಾಳಗುತ್ತು ಟಿ.ರಾಮಯ್ಯಕಿಲ್ಲೆ ವಹಿಸಿದ್ದರು. ವಿದ್ಯಾರತ್ನ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಜಿಲ್ಲಾ ಪಂಚಾಯತ್ ಮಾಜಿಉಪಾದ್ಯಕ್ಷ ಸತೀಶ್ ಕುಂಪಲ, ರಾಮಣ್ಣ ಶೆಟ್ಟಿ ಆಳ್ವರಬೆಟ್ಟು, ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘದಅಧ್ಯಕ್ಷಚಿತ್ತರಂಜನ್ ಬೋಳಾರ್, ಮಂಜನಾಡಿ ಶ್ರೀ ವಿಷ್ಣುಮೂರ್ತಿಜನಾರ್ಧನದೇವಸ್ಥಾನದ ಆಡಳಿತ ಮೊಕ್ತೇಸರರಾಮ್‌ಮೋಹನ್ ಆಳ್ವ ತೇವುನಾಡುಗುತ್ತು, ನ್ಯಾಯವಾದಿ ಹಾಗೂ ವೀರಭದ್ರದುರ್ಗಾ ಪರಮೇಶ್ವರದೇವಸ್ಥಾನ ಉಳ್ಳಾಲ ಇದರಅಧ್ಯಕ್ಷ ವಿಜಯ್‌ಕುಮಾರ್, ಕೋಟೆಕಾರುಗ್ರಾಮ ಪಂಚಾಯತ್ ಮಾಜಿಅಧ್ಯಕ್ಷ ಕೃಷ್ಣ ಶೆಟ್ಟಿತಾಮಾರು, ಉದ್ಯಮಿ ಭಾಸ್ಕರ್ ಪೂಜಾರಿ ಮುಂಬಯಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿಕ್ಷೇತ್ರದಅರ್ಚಕತಿಮ್ಮಪ್ಪ ಶಾಂತಿ, ಮರದ ಶಿಲ್ಪಿ ಸುಂದರಆಚಾರ್, ಕಪ್ಪುಕಲ್ಲು ಶಿಲ್ಪಿ ಅಣ್ಣಪ್ಪ, ಕೆಂಪುಕಲ್ಲು ಶಿಲ್ಪಿ ಕುಬೇರಪ್ಪಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
  ಈ ಸಂದರ್ಭದಲ್ಲಿ ಶ್ರೀ ಮಲರಾಯಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನಅಧ್ಯಕ್ಷ ಬಾಬು ಶ್ರಿಶಾಸ್ತ ಕಿನ್ಯ, ಕೋಶಾಧಿಕಾರಿ ವಾಮನ ಪೂಜಾರಿ ಬೆಳರಿಂಗೆ, ಟ್ರಸ್ಟಿಗಳಾದ ಎ.ಜೆ.ಶೇಖರ್,ಸತೀಶ್‌ಕರ್ಕೇರ,ಬ್ರಹ್ಮಕಲಶ,ಧರ್ಮನೇಮ ಸಮಿತಿಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು , ಕಿನ್ಯಗ್ರಾಮ ಪಂಚಾಯತ್ ಸದಸ್ಯ ಮಹಾಬಲ ಪೂಂಜ ಸಾಂತ್ಯ, ಪ್ರಧಾನ ಕಾರ್ಯದರ್ಶಿ ಶೇಖರ್‌ಕೊಂಡೆವೂರು, ಸ್ಥಳೀಯ ಹಿರಿಯರಾದಐತಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಮಲರಾಯಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನಗೌರವಾಧ್ಯಕ್ಷರಾದಕೆ.ಟಿ.ಸುವರ್ಣ ಸ್ವಾಗತಿಸಿ ಪ್ರಸ್ತಾವನೆಗೈದರು.ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿಕಿನ್ಯ ವಂದಿಸಿದರು.ಕಿರಣ್ ಬಜಾಲ್ ಮತ್ತು ಪ್ರವೀಣ್‌ಎಸ್. ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News