ಉಳ್ಳಾಲ: ಯೆನೆಪೊಯ ಆಸ್ಪತ್ರೆಯಲ್ಲಿ ಕಡವೇರಿಕ್ ಮೂತ್ರಪಿಂಡ ವರ್ಗಾವಣೆ ಯಶಸ್ವಿ

Update: 2016-03-24 14:55 GMT

ಉಳ್ಳಾಲ: ದೇರಳಕಟ್ಟೆಯ ಯೇನೆಪೊಯಆಸ್ಪತ್ರೆಯಲ್ಲಿರೋಗಿಯೊಬ್ಬರಿಗೆಕಡವೇರಿಕ್ ಮೂತ್ರಪಿಂಡ ವರ್ಗಾಯಿಸುವ (ಕಿಡ್ನಿ ಕಸಿ) ಶಸ್ತ್ರಚಿಕಿತ್ಸೆಯನ್ನುಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ದ.ಕ.ಮತ್ತುಉಡುಪಿ ಅವಳಿ ಜಿಲ್ಲೆಗಳಲ್ಲಿ ಇದು ಪ್ರಥಮ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದ್ದು, ಮಾ. 22ರಂದು ಮಣಿಪಾಲದಕಸ್ತೂರ್ಬಾಆಸ್ಪತ್ರೆಯಲ್ಲಿ ಮೆದುಳಿನ ನಿಷ್ಕ್ರಿಯದಿಂದ ಮೃತಪಟ್ಟ ವ್ಯಕ್ತಿಯ ಮೂತ್ರಪಿಂಡವನ್ನು ಕಳೆದ ನಾಲ್ಕು ವರ್ಷದಿಂದಕಿಡ್ನಿತೊಂದರೆಯಿಂದ ಡಯಾಲಿಸಿಸ್ ಚಿಕಿತ್ಸೆಗಾಗಿಯೇನೆಪೊಯಆಸ್ಪತ್ರೆಯಲ್ಲಿದಾಖಲಾಗಿದ್ದ 25 ವರ್ಷ ಪ್ರಾಯದ ಮಹಿಳಾ ರೋಗಿಯೊಬ್ಬರಿಗೆ ಹೊಂದಾಣಿಕೆಯಾದ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಈ ಯಶಸ್ವಿ ಶಸ್ತ್ರಚಿಕಿತ್ಸಾತಂಡದಲ್ಲಿಯೇನೆಪೊಯಆಸ್ಪತ್ರೆಯಯೂರೋಲಾಜಿ ವಿಭಾಗದಡಾ ಮುಜೀಬುರಹಮಾನ್‌ಡಾ ನಿಶ್ಚಿತ್ ಡಿ.ಸೋಜ ಮತ್ತುಅಲ್ತಾಫ್‌ಖಾನ್, ನೆಫ್ರೋಲಾಜಿ ವಿಭಾಗದಡಾ ಸಂತೋಷ್ ಪೈ, ಅನೆಸ್ತಿಷಿಯಾ ವಿಭಾಗದಡಾ ಪದ್ಮನಾಭ ಭಟ್, ಡಾ ರಾಮ ಮೂರ್ತಿ, ಮತ್ತು ಶ್ರುತಿತಂಡದಲ್ಲಿದ್ದರು.
ಅಂಗಾಗ ದಾನಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಡಾ ವಿಶಾಲ್ ಮತ್ತು ಮಣಿಪಾಲ ಕಸ್ತೂರ್ಬಾಆಸ್ಪತ್ರೆಯಯೂರೋಲಾಜಿ ಮತ್ತು ನೆಫ್ರೋಲಾಜಿ ವಿಭಾಗದ ಸಹಕಾರವನ್ನುಯೇನೆಪೊಯಆಸ್ಪತ್ರೆಯ ಮುಖ್ಯಸ್ಥರು ಶ್ಲಾಘಿಸಿದ್ದಾರೆ.

ಯೇನೆಪೊಯ ವಿಶ್ವವಿದ್ಯಾನಿಲಯದ ಹಣಕಾಸು ವಿಭಾಗದ ನಿರ್ದೇಶಕಯೇನೆಪೊಯ ಪರ್ಹಾದ್‌ಅವರುಕಿಡ್ನಿ ಕಸಿಗೆ ಸಂಬಂಧಿಸಿದಂತೆ ಅತ್ಯಂತಕಡಿಮೆ ವೆಚ್ಚದಲ್ಲಿರೋಗಿಗೆ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ನಡೆಸಿದ್ದು, ಇದರಿಂದ ಮೂತ್ರಪಿಂಡ ವರ್ಗಾವಣೆ ಮತ್ತು ಅಂಗಾಗ ದಾನಕ್ಕೆ ಸಂಬಂಧಿಸಿದ ಕಾರ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News