ಮುಲ್ಕಿ: 82.4 ಲಕ್ಷ ರೂ. ವೆಚ್ಚದ ನೂತನ ಪ್ರೌಢ ಶಾಲಾ ಕಟ್ಟಡ ಉಧ್ಘಾಟನೆ

Update: 2016-03-24 15:08 GMT

ಮುಲ್ಕಿ, ಮಾ.24: ಇಲ್ಲಿನ ಕೆ.ಎಸ್.ರಾವ್ ನಗರದ ಸರಕಾರಿ ನೂತನ ಪ್ರೌಢ ಶಾಲಾ ಕಟ್ಟಡವನ್ನು 82.4 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಕರ್ನಾಟಕ ರಾಜ್ಯ ಮೀನುಗಾರಿಕೆ, ಕ್ರೀಡೆ ಹಾಗೂ ಯುವಜನ ಸೇವಾಸಚಿವ ಅಭಯಚಂದ್ರ ಜೈನ್ ಶನಿವಾರ ಉಧ್ಘಾಟಿಸಲಿದ್ದಾರೆ.

   ಅಲ್ಲದೆ, ಮುಲ್ಕಿ ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಅವರ ಶಾಸಕರ ನಿಧಿಯ 5 ಲಕ್ಷ ರೂ ಅನುದಾನದಲ್ಲಿ ಪ್ರಾಥಮಿಕ ಶಾಲೆಯನ್ನು ನವೀಕರಿಸಲಾಗಿದ್ದು ಅದರ ಉಧ್ಘಾಟನೆಯೂ ಅಂದೇ ನಡೆಯಲಿದೆ ಎಂದು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಬಿ.ಎಂ ಆಸಿಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News