ಮೂಡುಬಿದಿರೆ: ಪಡುಮಾರ್ನಾಡಿನಲ್ಲಿ ಮಾರುತಿ ಫ್ರೆಂಡ್ಸ್ ಕ್ಲಬ್ ಉದ್ಘಾಟನೆ
Update: 2016-03-24 22:19 IST
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಮುನ್ನೇರಿನ ಮಾರುತಿ ಫ್ರೆಂಡ್ಸ್ ಕ್ಲಬ್‌ನ ಉದ್ಘಾಟನೆಯನ್ನು ಕ್ಲಬ್ ಗೌರವಾಧ್ಯಕ್ಷ ಹಾಗೂ ಹಿರಿಯ ಸಹಕಾರಿ ಧುರೀಣ ಎಂ. ದಯಾನಂದ ಪೈ ಇತ್ತೀಚಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂಬೈನ ಹೋಟೆಲ್ ಉದ್ಯಮಿ ಪ್ರಶಾಂತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಜಯ ಕೋಟ್ಯಾನ್ ಭಾಗವಹಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ, ಪಡುಮಾರ್ನಾಡ್ ಪಂಚಾಯತ್ ಸದಸ್ಯರಾಗಿರುವ ಉಮೇಶ್ ಕುಮಾರ್ ಮಾತನಾಡಿ ಸಂಘಟನೆಯ ಮೂಲಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು, ಸ್ವಚ್ಛತಾ ಕಾರ್ಯಕ್ರಮಗಳ ಜತೆಗೆ ಗ್ರಾಮೀಣ ಸರ್ವತೋಮುಖ ಅಭಿವೃದ್ಧಿಗೆ ಚಟುವಟಿಕೆಗಳು, ಸರ್ಕಾರದ ಯೋಜನೆಗಳನ್ನು ಗ್ರಾಮದ ಜನತೆಗೆ ಪರಿಚಯಿಸುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದರು.
ಕಾರ್ಯದರ್ಶಿ ಜಿತೇಶ್ ಕೋಟ್ಯಾನ್ ವಂದಿಸಿದರು. ಉಪಾಧ್ಯಕ್ಷ ಪ್ರಶಾಂತ ಹೆಗ್ಡೆ, ಸಲಹಾ ಸಮಿತಿ ಸದಸ್ಯ ಶ್ರೀಧರ ವಾಮನ ನಾಯಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.