ಕಥಾಪ್ರಸಂಗಂ ಪಟು, ನಟ ವಿ.ಡಿ.ರಾಜಪ್ಪನ್ ನಿಧನ
Update: 2016-03-24 23:33 IST
ಕೊಟ್ಟಾಯಂ,ಮಾ.24: ಕೇರಳದ ಜನಪ್ರಿಯ ಕಥಾಪ್ರಸಂಗಂ ಕಲಾವಿದ ಮತ್ತು ಹಾಸ್ಯಪಾತ್ರಗಳಿಗೆ ಹೆಸರಾಗಿದ್ದ ಮಲಯಾಳಂ ಚಿತ್ರನಟ ವಿ.ಡಿ.ರಾಜಪ್ಪನ್(70) ಅವರು ಗುರುವಾರ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.
ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
50ಕ್ಕೂ ಅಧಿಕ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ರಾಜಪ್ಪನ್ ವಿಡಂಬನಾತ್ಮಕ ಧಾಟಿಯಲ್ಲಿ ಕಥಾಪ್ರಸಂಗಗಳನ್ನು ಹೇಳುವ ತನ್ನ ವಿಶಿಷ್ಟ ಶೈಲಿಗಾಗಿ ಖ್ಯಾತರಾಗಿದ್ದರು. 1970 ಮತ್ತು 80ರ ದಶಕಗಳಲ್ಲಿ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿ ಕೇರಳದ ಉತ್ಸವಗಳ ಕಾರ್ಯಕ್ರಮಗಳಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದರು.