×
Ad

ಇಂಡಿಗೋ ವಿಮಾನಗಳಿಗೆ ಬಾಂಬ್ ಬೆದರಿಕೆ

Update: 2016-03-24 23:34 IST

ಚೆನ್ನೈ,ಮಾ.24: ಇಂಡಿಗೋ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಆತಂಕದ ಸ್ಥಿತಿ ಸೃಷ್ಟಿಯಾಗಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದೇಶಿಯ ಮತ್ತು ವಿದೇಶಿ ವಿಮಾನಯಾನಗಳನ್ನು ನಿರ್ವಹಿಸುವ ಈ ವಿಮಾನ ನಿಲ್ದಾಣದಲ್ಲಿ ಏಳು ಸ್ತರಗಳ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು,ಸಂದರ್ಶಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ವಿಮಾನ ನಿಲ್ದಾಣವನ್ನು ಪ್ರವೇಶಿಸುವ ವಾಹನಗಳನ್ನು ರಾಜ್ಯ ಪೊಲೀಸರು ತಪಾಸಣೆಗೊಳಪಡಿಸುತ್ತಿದ್ದರೆೆ, ಎಲ್ಲ ಬ್ಯಾಗೇಜ್‌ಗಳ ತಪಾಸಣೆಯ ಹೊಣೆಯನ್ನು ಸಿಐಎಸ್‌ಎಫ್‌ಗೆ ವಹಿಸಲಾಗಿದೆ.
ಇಂಡಿಗೋ ಸಂಸ್ಥೆಯ 11 ವಿಮಾನಗಳಲ್ಲಿ ಬಾಂಬ್‌ಗಳು ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂಬ ದೂರವಾಣಿ ಕರೆಯೊಂದು ಬುಧವಾರ ಅಮೆರಿಕದಿಂದ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News